ಪಿಂಕಿಯ ನೆನಪಿಗೆಪಿಂಕಿ ಯ ಸ್ಮರಣೆಗಾಗಿ ಇದು ಒಂದು ಲೇಖನ . ಪಿಂಕಿ ಎಂದರೆ ನಮ್ಮ ಮುದ್ದಿನ ಒಂದು ಸಾಕು ನಾಯಿ . ಇದರ ಸಾವಾಗಿ ದಿನಾಂಕ ೧೩ ರಂದು ೩ ವರ್ಷ ಕಳೆದವು . ಇದು ಒಂದು ಪ್ರಾಣಿ .
ಪಿಂಕಿ ಯ ಸ್ಮರಣೆಗಾಗಿ ಇದು ಒಂದು ಲೇಖನ .
ಪಿಂಕಿ ಎಂದರೆ ನಮ್ಮ ಮುದ್ದಿನ ಒಂದು ಸಾಕು ನಾಯಿ .
ಇದರ ಸಾವಾಗಿ ದಿನಾಂಕ ೧೩ ರಂದು ೩ ವರ್ಷ ಕಳೆದವು .
ಇದು ಒಂದು ಪ್ರಾಣಿ .ಆದರೆ ಮನುಷ್ಯರಿಗಿಂತ ಮೇಲು .ರಾಜಕಾರಣ ಮಾಡುವುದಿಲ್ಲ .ಪ್ರೀತಿಸುವುದರಲ್ಲಿ ವಿಶ್ವಾಸದಲ್ಲಿ ಮನುಷ್ಯ ಜಾತಿಗಿಂತ ಮೇಲು.
ಅನ್ನದ ಬದಲಾಗಿ ಪ್ರೇಮ ಕೊಡುತ್ತದೆ .
ನನ್ನ ಹೆಂಡತಿ ಮತ್ತು ನಾನು ನಮ್ಮ ಮನೆಯ ಅವರಣದ ಹಿಂಬಾಗದಲ್ಲಿ ಹೂಳುವಾಗ ಸಾವಿಗಾಗಿ ಅತ್ತೆವು .
ಗರ್ಭ ಕೋಶದ ಕ್ಯಾಂಸೆರ್ ನಿಂದ ಸಾವು ಬಂದು ವೈದ್ಯರ ಪ್ರಯತ್ನ ವಿಫಲ ವಾಗಿ ಕೊನೆಯುಸಿರು ಎಳೆಯಿತು .
ಗಂಗೆಯ ಗಂಗಾಜಲ ಬಾಯಲ್ಲಿ ಸುರಿದು ಮುಂದೆ ಉತ್ತಮ ಜನ್ಮ ಸಿಗಲಿ ಎಂದು ಪರಮಾತ್ಮನನ್ನು ಪ್ರಾರ್ಥಿಸಿದೆವು .
ಬೀದಿಯಲ್ಲಿ ಪಿಂಕಿ ಮನೆ ಎಂದು ಕರೆಯುತ್ತಿದ್ದರು .ಚಿಕ್ಕ ಮಕ್ಕಳು ನಮ್ಮಿಬರನ್ನು ಪಿಂಕಿ ಅಪ್ಪ ಮತ್ತು ಅಮ್ಮ ಎಂದು ಕೇಳಿ ನಿಮಗೆ ನಗು ಬರುತ್ತದೆ ಸಹಜ .ಆದರೆ ಸಾಕು ಪ್ರಾಣಿಯ ಜೊತೆ ಎಷ್ಟು ಸಂಬಂಧ ಹೇಗೆ ಎನ್ನುವುದು ಎಲ್ಲರೂ ತಿಳಿಯಲು ಸಾಧ್ಯವಿಲ್ಲ .
ನಮ್ಮ ಕಾರಿನಲ್ಲಿ ತೀರ್ಥಕ್ಷೇತ್ರ ಮುಂಬೈ ,ಬೆಂಗಳೂರು ,ಪುಣೆ ನೋಡಿದ ವಿಶೇಷ ಪ್ರಾಣಿ ಯಾಗಿತ್ತು .
ಮಗಳಿಗೆ ಪ್ರೀತಿಯಿಂದ ವಾಹನದ ಮುಂದಿನ ಸೀಟಿನಲ್ಲಿ ಕೂರುವ ಮತ್ತು ಪ್ರೀತಿಯ ನಾಯಿ ಇನ್ನೂ ಇಲ್ಲ ಎನ್ನುವ ಬೇಸರ ನಮ್ಮೆಲ್ಲರಿಗೂ ಇಂದಿಗೂ ಕಾಡುತ್ತಿದೆ .ಆದರೆ ನಾವು ವಿಧಿಯ ಆಟ ಒಪ್ಪಲೇ ಬೇಕು .
ನಮ್ಮ ನಾಯಿಯ ಬಗ್ಗೆ ವಿವರಿಸಲು ತುಂಬಾ ವಿಷಯ ಗಳಿದ್ದರೂ ದುಖ ಪೂರಿತ ಮನಸ್ಸಿನವನಾಗಿ ಲೇಖನ ಮುಗಿಸುತ್ತೇನೆ .
ಇಂತಹ ಅನುಭವಗಳು ನನ್ನಂತಹ ಕೆಲವರಿಗೆ ಆಗಿರ ಬಹುದು ಬರೆಯುವ ಮನಸ್ಸು ಮಾಡಿ ಪ್ರಾಣಿ ಪ್ರಿಯರಿಗೆ ದಯವಿಟ್ಟು ತಿಳಿಸಿ .ನಂಬಿಕೆ ದ್ರೋಹ ಮಾಡುವ ರಾಜಕಾರಣಿಗಳನ್ನೂ ಹೋಲಿಸಿದಾಗ ಪ್ರಾಣಿಗಳು ಲೇಸು .
ಸಾಕು ಪ್ರಾಣಿಗಳ ಬಗ್ಗೆ ಗಮನ ವಿರಲಿ .ನಿಮ್ಮ ಬೇಸರ ಕಳೆಯ ಬಹುದು .ಅರೋಗ್ಯ ಸುಧಾರಣೆ ಸತ್ಯ .
ಇದು ನಮ್ಮ ಸುಂದರ ಮೈಸೂರು ಪ್ರಕಟಣೆ .
ವ್ಯಕ್ತಿತ್ವ ವಿಕಾಸ ಮಾಲಿಕೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ ಕುಟುಂಬ .


0 Comments:
Post a Comment
Subscribe to Post Comments [Atom]
<< Home