Monday, August 29, 2011

ಜನತೆಯ ಹೋರಾಟ ಎಷ್ಟು ದಿನ ಸಾಗುತ್ತದೆ

ನಮ್ಮ ಸಮಾಜ ,ರಾಜ್ಯದ ಮತ್ತು ರಾಷ್ಟ್ರದ ಜನತೆ ಬೇಡಿಕೆಗಳು ಹೊರಾಟ ವಿಲ್ಲದೇ ಇಡೆರಿಸಲು ಸಾಧ್ಯವಿಲ್ಲವೇ ?
ಇದು ನಮಗೆ ಕಾಡುವ ಬಹು ಮುಖ್ಯ ಪ್ರಶ್ನೆ ಯಾಗಿದೆ .
ಅಣ್ಣಾ ಹಜಾರೆ ಯವರ ಉಪವಾಸ ಸತ್ಯಾಗ್ರಹ ಅರ್ಧ ಜಯ ದೊಂದಿಗೆ ಮುಕ್ತಾಯ .
ಚಳವಳಿ ಮುಂದು ವರಿಯುವುದು .
ಆದರೆ ದಿನೇ ದಿನೇ ಜನರ ಸಮಸ್ಯೆಗಳು ಹೆಚ್ಚಾಗುವ ಕಾರಣ ಜನತೆ ಶಾಂತಿಯುತ ಹೊರಾಟ ಮತ್ತು ಸಂಘರ್ಷ ದಾರಿಯಲ್ಲಿ ಸಾಗುವ ಲಕ್ಷಣಗಳು ಕಂಡು ಬಂದಿವೆ .
ಸಾಮಾನ್ಯವಾಗಿ ವಿಧ್ಯಾರ್ಥಿಗಳು.ರೈತರಿಗೆ,ರಾಜಕೀಯ ಪಕ್ಷಗಳು
ತಮ್ಮ ಬೇಡಿಕೆಗೆ ಸರಿಯಾದ ಸಮಾಧಾನ ಸಿಗದೇ ಇರುವ ಕಾರಣ ಇ ಮಾರ್ಗವೇ ಸರಿಯಾದ ಮಾರ್ಗ ಎಂದು ಯೋಚಿಸುತ್ತಾರೆ .ಇಲ್ಲಿ ನಮಗೆ ಹೋರಾಟಕ್ಕಾಗಿ ಬೀದಿಗೆ ಇಳಿಯಲು ಯಾರು ಕಾರಣ :
ನಮ್ಮ ಆಡಳಿತದಲ್ಲಿ ಇರುವ ರಾಜಕಾರಣಿಗಳು/ವಿರೋಧ ಪಕ್ಷಗಳು ಅಥವಾ ಜನತೆಯೇ ?
ಇನ್ನಾದರೂ ಇ ನಮ್ಮ ಪ್ರಶ್ನೆಗೆ ಸಮಾಧಾನ ಸಿಗಲು ಪ್ರಯತ್ನಿಸಿ.
ದಿನ ನಿತ್ಯದ ಜೀವನ ವಹಿವಾಟು ಗಳಿಗೆ ಸಮಯ ವನ್ನು ಅನಿಶ್ಚಿತ ಫಲಿತಾಂಶಕ್ಕಾಗಿ ಹಾಳು ಮಾಡುವುದು ಸರಿಯಲ್ಲ .
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ ಮುಖಾಂತರ ಸಮಸ್ತ ಜನತೆ ಯೊಂದಿಗೆ/ಸರಕಾರವನ್ನು ಕೈ ಮುಗಿದು ಬೇಡಿಕೊಂಡು ಅಮೂಲ್ಯವಾದ ಸಮಯವನ್ನು ದೇಶ ಪ್ರಗತಿ ಪಥ ದತ್ತ ಸಾಗುವಂತೆ ಮಾಡಲಿ .
ಸರ್ಕಾರ ಬಿಗುಮಾನ/ಸ್ವ ಪ್ರತಿಷ್ಠೆ ಬಿಟ್ಟು ಜನತೆಯ ಕಷ್ಟ ಪರಿಹಾರ ಮಾಡುವ ಪ್ರಯತ್ನ ದಲ್ಲಿ ಮುಂದುವರಿದಾಗ ಕಟ್ಟಬಹುದು ನಮ್ಮ ಇ ಭವ್ಯ ಭಾರತ .
ಜನಶಕ್ತಿ ಪ್ರಜಾತಂತ್ರಕ್ಕೆ ಅಡಿಪಾಯ .
ಜೈ ಹಿಂದ್
ಭಾರತ್ ಮಾತಾ ಕೀ ಜೈ
ಕುಂದಾಪುರ ನಾಗೇಶ್ ಪೈ . .
ಎಲ್ಲಾ ಕ್ಷೇತ್ರ ಗಳಿಂದ ಆರಿಸಿಬಂದ ಪ್ರತಿನಿಧಿಗಳು ಸಂಪೂರ್ಣ ಮಾಹಿತಿ ಪಡೆದು ತಮ್ಮ ತಮ್ಮ ಕ್ಷೇತ್ರ ಗಳ ಸರ್ವತೋಮುಖ ಅಭಿವೃಧ್ಧಿ ಗೆ ದುಡಿಯ ಬೇಕು .

Friday, August 19, 2011

ದೇಶದ ಬಲಿಷ್ಟ ಶಕ್ತಿ -ಅಣ್ಣಾ ಹಜಾರೆ .

ಅಣ್ಣಾ ಹಜಾರೆ -ಬ್ರಷ್ಟಾಚಾರ ನಿರ್ಮೂಲನಾ ಯಂತ್ರ.
ಇ ಯಂತ್ರ ಭವ್ಯ ಭಾರತದ ಮೂಲೆ ಮೂಲೆಯಲ್ಲಿ ತನ್ನ ಕಾರ್ಯ ಪ್ರಾರಂಭಿಸಿ ಕೇಂದ್ರ ಸರ್ಕಾರ ತನ್ನ ಬಿಗು ನೀತಿಯನ್ನು ಸಡಿಲಿಸಿ ಪ್ರಬಲ ಜನ ಲೋಕಪಾಲ ಮಸೂದೆಯನ್ನು ಲೋಕಸಭಾ ದಲ್ಲಿ ಮಂಡಿಸಿ ಜಾರಿಗೆ ತರಲು ಪ್ರಯತ್ನಿಸ ಬೇಕಾಗಿದೆ.ಇಲ್ಲವಾದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಹಾದಿಯತ್ತ ದೇಶದ ಜನತೆ ಸಾಗಿದೆ ಎಂದು ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಯು ಪಿ ಏ ಮನವರಿಕೆ ಮಾಡಿಕೊಂಡಿದೆ .
ಅಣ್ಣಾ ಹಜಾರೆ ಸಾಮಾನ್ಯ ಗಾಂಧೀವಾದಿ ಸ್ವಾಂತಂತ್ರ್ಯ ಹೋರಾಟಗಾರ ರಾಗಿರದೆ ನಮ್ಮ ದೇಶದ ಬಲಿಷ್ಟ ಶಕ್ತಿಯಾಗಿ
ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ ಜನತೆಯನ್ನು ಸಂಘಟಿಸಿದ್ದಾರೆ.
ಜಾತಿ ,ಮತ ಹೆಣ್ಣು ಗಂಡು ಮಕ್ಕಳು ಎನ್ನುವ ಭೇಧ ಭಾವನೆ ಇಲ್ಲದೆ ಒಗ್ಗಟ್ಟಾಗಿ ಇಲ್ಲಿ ಸೇರಿರುವುದು ವಿಶೇಷ .
ರಾಜ್ಯಗಳು ಒಟ್ಟಾಗಿ ಚಳವಳಿಯಲ್ಲಿ ಭಾಗವಹಿಸಿ ಭ್ರಷ್ಟಾಚಾರ ಒಂದು ಮಹಾರೋಗ ಇದನ್ನು ಕೊಲ್ಲಲೇ ಬೇಕು ಎಂದು ಪಣ ತೊಟ್ಟಿವೆ .
ನಮ್ಮ ನಿವೇದನೆ ಅಣ್ಣಾ ಹಜಾರೆ ಬೆಂಬಲಿಸಿ ಮತ್ತು ಹೋರಾಟ ದಲ್ಲಿ ಭಾಗವಹಿಸಿ
ನಿಮ್ಮ ಸಂಪೂರ್ಣ ಶಕ್ತಿ ಪ್ರಯೋಗಿಸಿ ಭ್ರಷ್ಟಾಚಾರ ನಿರ್ಮ್ಮೊಲನೆ ಗೆ ಸಹಕರಿಸಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ಅಣ್ಣಾ ಹಜಾರೆ ಜಿಂದಾಬಾದ್
ಕುಂದಾಪುರ ನಾಗೇಶ್ ಪೈ .

Tuesday, August 16, 2011

ಅಣ್ಣಾ ಹಜಾರೆ ಹೋರಾಟ ದಲ್ಲಿ ಸಹಕರಿಸಿ ಮತ್ತು ಕೈ ಜೋಡಿಸಿ

ಇನ್ನೊಂದು ಸಂಗ್ರಾಮಕ್ಕೆ ಭಾರತೀಯರು ಅಣಿ ಯಾಗ ಬೇಕಾಗಿದೆ .
15th August 1947 ರ ಸ್ವಾತಂತ್ರ್ಯ ಸಂಗ್ರಾಮ ಯುದ್ಧ ಆಂಗ್ಲರನ್ನು ' ಭಾರತ ಬಿಟ್ಟು ತೊಲಗಿ '
ಎನ್ನುವ ಯುದ್ಧವಾಗಿ ನಾವು ವಿಜಯಿಯಾಗಿ ೬೫ ನೇ ಸ್ವಾತಂತ್ರ್ಯ ದಿನಾಚಾರಣೆ ಆಚರಿಸಿದೆವು .
ಈಗ ಇನ್ನೊಂದು ಮಹಾ ಯುದ್ಧಕ್ಕೆ ತಯ್ಯಾರಿ ನಡೆಸ ಬೇಕಾಗಿದೆ .
ಇದು ವಿದೇಶಿಯರು ಭಾರತ ಬಿಟ್ಟು ಹೋಗುವ ವಿಷಯವಲ್ಲಾ .
ಬದಲಾಗಿ ನಮ್ಮೆಲ್ಲರ ಮಹಾ ರೋಗ ಬ್ರಷ್ಟಾಚಾರ/.ನಿರ್ಮೂಲನೆ.ಅಗತ್ಯ
ಇದಕ್ಕಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ.
ಇದನ್ನು ಕೇಂದ್ರದಲ್ಲಿ ಆಡಳಿತ ಸರ್ಕಾರ ಅಣ್ಣಾ ರ ಬಗ್ಗೆ ನಡೆದುಕೊಂಡ ರೀತಿ ಅವಾಮಾನವೀಯ .
ಇದಕ್ಕಾಗಿ ಹೊರಾಡುವ ಅಗತ್ಯ ನಿರ್ಮಾಣ ವಾಗಿದೆ .
ಕೇಂದ್ರ ದ ಪ್ರಧಾನಿ ಮತ್ತು ಅವರ ಮಂತ್ರಿಮಂಡಲದ ಸಂಪುಟ ಸದಸ್ಯರು ವಿನಾಕಾರಣವಾಗಿ ದೇಶದ ಪ್ರಜಾತಂತ್ರದ ಬಗ್ಗೆ ಚೆಲ್ಲಾಟವಾಡುವ ಪ್ರವ್ರತ್ತಿ ಬಿಡಬೇಕು .
ಅಣ್ಣಾ ಭಂಧನ ವಿಮುಕ್ತಿ ಮಾಡು ವುದು ಮತ್ತು ಅವರ ಹೋರಾಟ ಶಕ್ತಿ ಕುಗ್ಗಿಸದೇ ಪ್ರಜಾತಂತ್ರಕ್ಕೆ ಮನ್ನಣೆ ಸಿಗಬೇಕು .
ಇದುವೇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಕೇಂದ್ರದ ಆಡಳಿತ ಸರಕಾರಕ್ಕೆ ನಿವೇದನೆ .
ಒಗ್ಗಟ್ಟಿನಲ್ಲಿ ಬಲವಿದೆ ಎಂದು ವಿಶ್ವಕ್ಕೆ ಭಾರತೀಯರು ತೋರಿಸಿ ವಿಶ್ವದ ಅತಿದೊಡ್ಡ ಪ್ರಜಾ ಪ್ರಭುತ್ವ ಎಂದು ತೋರಿಸ ಬೇಕು .
ಇ ಹೋರಾಟ ದಲ್ಲಿ ಎಲ್ಲರೂ ಭಾಗವಹಿಸಿ .
ವಂದನೆಗಳೊಂದಿಗೆ
ಕುಂದಾಪುರ ನಾಗೇಶ್ ಪೈ .

Friday, June 3, 2011

ಕನ್ನಡ ಜನತೆಗೆ ಆದ ಅನ್ಯಾಯ ಸರಿಪಡಿಸಿ

ಇಷ್ಟಾದರೂ ಬುದ್ಧಿ ಬರ ಬಾ ರದೆ ವಿರೋಧ ಪಕ್ಷಗಳಿಗೆ ,ಇದು ದಾಸರ ಪದಗಳಿಗೆ ಸಮನಾದ ವಾಖ್ಯ ನಮ್ಮ ಕರ್ನಾಟಕ ರಾಜ್ಯದ ರಾಜಕಾ ರಣಿ ಗಳಿಗೆ ,
ನಮ್ಮ ರಾಜ್ಯದಲ್ಲಿ ಅಭಿವ್ರದ್ಧಿ ಎನ್ನುವ ಮಾತು ಹೇಗೇ ಬರಲು ಸಾಧ್ಯ ಇ ರೀತಿಯ ವೈಷಮ್ಯದ ಅಲೆಗಳಿಂದ ಆಡಳಿತ ಕೆಟ್ಟು ಹೋಗಿ ಪ್ರತಿ ದಿನ ವಿರೋಧ ಪಕ್ಷ ಮತ್ತು ರಾಜ್ಯಪಾಲರ ನಡತೆಯಿಂದ ಆಡಳಿತ ಯಂತ್ರ ಮುಖ್ಯ ರಸ್ತೆ ಬಿಟ್ಟು ಕಣಿವೆ ಯನ್ನು ಸೇರಿದೆ .ಮೂರು ವರ್ಷ ಮುಖ್ಯಮಂತ್ರಿ ಹೇಗೇ ಕಳೆದಿದ್ದರೋ ದೇವರೇ ಬಲ್ಲ ಮತ್ತು ಇದೆ ರೀತಿ ಮುಂದುವರಿದರೆ ಉಳಿದ ಎರಡು ವರುಷ ಕಳೆಯುವುದರ ಬಗ್ಗೆ ಅನುಮಾನವೇ ಸರಿ .ನಾನು ಇ ರಾಜ್ಯದ ಪ್ರಜ್ಞಾವಂತ ನಾಗರೀಕನಾಗಿ ರಾಜ್ಯ ಮತ್ತು ರಾಷ್ಟ್ರ ಡಾ ಬಗ್ಗೆ ಕಳಕಳಿಯಿಂದ ರಾಜ್ಯದ ಏಳು ಕೋಟಿ ಜನತೆಯಳ್ಳಿ ಒಬ್ಬವನಾಗಿ ಯಾವುದೇ ಪಕ್ಷಕ್ಕೆ ಸಾಥ್ ಕೊಡದೆ ಇ ಲೇಖನ ಬರೆಯುತ್ತಿದ್ದೇನೆ.
ನಿಸ್ವಾರ್ಥಿಯಾಗಿ ಸದನಗಳನ್ನು ನಡೆಸಲು ಬಿಡಿ ಉಳಿದ ಸಮಯದಲ್ಲಿ ಅಭಿವ್ರದ್ಧಿ ಆಗಲಿ .ನಮ್ಮದು ಪ್ರಜಾತಂತ್ರರಾಜ್ಯ ಮತ್ತು ದೇಶವಾಗಿದೆ ನಿಮಗೆ ಹಿತವಲ್ಲದ ಆಡಳಿತ ಕಿತ್ತು ಹಾಕುವ ಹಕ್ಕು ನಿಮ್ಮಲ್ಲಿ ಇದೆ .ಅದುದರಿಂದ ಮುಂದಿನ ಚುನಾವಣೆಯಲ್ಲಿ ಯೋಗ್ಯ ವ್ಯಕ್ತಿಯನ್ನೇ ಆರಿಸಿ ತನ್ನಿ ಈಗ ವಿಶ್ವಾಸ ಮತ ಗೆದ್ದಿರುವ ಸರ್ಕಾರ ಎರಡು ವರುಷ ಪೂರೈಸಲಿ .ಕೇಂದ್ರ ಸರಕಾರದ ಅನುದಾನ ಉಪಯೋಗಿಸಿ ರೈತರಿಗೆ ಮತ್ತು ಬಡತನ ರೇಖೆ ಯಿಂದ ಕೆಳಗೆ ಇರುವವರಿಗೆ ಹೆಚ್ಚು ಸಹಾಯದಿಂದ ನಾ ವೆಲ್ಲರೂ ಸುಖಿ ಕರ್ನಾಟಕ ನೋಡೊಣ ಬನ್ನಿ
ಅಡಲಿತ ಪಕ್ಷದ ಮುಖ್ಯಮಂತ್ರಿಯವರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಖುರ್ಚಿ ಜಗಳಾಟ ನಡೆಯುತ್ತಲೇ ಇದೆ ..
ರಜದ ೭ ಕೋಟಿ ಜನ ಬೇಸತ್ತಿದ್ದಾರೆ .ಇನ್ನಾದರೂ ರಾಜಕೀಯ ಪಕ್ಷಗಳಿಗೆ ಬುದ್ಧಿ ಬರಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಕುಂದಾಪುರ ನಾಗೇಶ್ ಪೈ .
ಕನ್ನಡ ಭಾಷೆ ಮೆರೆಯಲಿ ನಮ್ಮ ಭಂಧುತ್ವ ಬೆಳೆಯಲಿ .
ಜೈ ಹಿಂದ್

Monday, May 23, 2011

ಭಾರತೀಯ ಶಿಕ್ಷಣ ಪದ್ಧತಿ ಉದ್ಯೋಗ ಪೂರ್ವ ಸಿದ್ಧತೆಯೇ ಅಥವಾ ಜ್ನನಕ್ಕಾಗಿಯೇ

ನಮ್ಮ ಭಾರತೀಯ ಶಿಕ್ಷಣ ಪದ್ಧತಿ .
ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿ
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಇಂದಿನ ವಿಧ್ಯಾಭ್ಯಾಸದ ಮೂಲ ಉದ್ಧೇಶ ಗಳ ಮಾಹಿತಿ ವಿಧ್ಯಾರ್ಥಿಗಳಿಗೆ,ಹೆತ್ತವರಿಗೆ ಶಿಕ್ಷಕರಿಗೆ,ದೇಶದ ಪ್ರಜೆಗಳುಮತ್ತು ಆಳುವ ಸರಕಾರಕ್ಕೆ ತಿಳಿಸ ಬೇಕಾಗಿದೆ .ಕೇವಲ ಹತ್ತನೇ ತರಗತಿ ಓದಿ ಏಕಲವ್ಯನ ಗುರಿ ಇದ್ದ ಹಾಗೇ ಜ್ಞಾನ ಸಂಪಾದನೆ ಒಂದೇ ಮುಖ್ಯ ಎಂದು ತಿಳಿದು ಗ್ರಂಥಾಲಯ,ಪತ್ರಿಕೆ ಅಂತರ್ಜಾಲದ ವೆಬ್ಸೈಟ್ ಗಳಲ್ಲಿ ಮಾಹಿತಿ ಕಲೆ ಹಾಕಿ ತಿಳಿದು ಜಿರ್ಣೀಸಿ ಇನ್ನೊಬ್ಬರಿಗೆ ಕಲಿಸುವ ಶಕ್ತಿ ಉಳ್ಳವರು ನಮ್ಮ ದೇಶದಲ್ಲಿ ಕೊರತೆ ಇಲ್ಲಾ .ಅವರು ಪ್ರದರ್ಶನ ಮಾಡುವುದಿಲ್ಲ .ಭಾರತದ ಪ್ರತಿಯೊಬ್ಬ ಪ್ರಜೆಗೆ ಶಿಕ್ಷಣ ಅಗತ್ಯ .ಇದರಿಂದ ವ್ಯಕ್ತಿತ್ವ ವಿಕಾಸ ವಾಗ ಬೇಕೇ ವಿನಃ ಭಯೋತ್ಪಾದನೆ ,ವಿಶ್ವ ನಾಶಕ್ಕೆ ಮಾರ್ಗ ವಾಗಿರ ಬಾರದು ಯುವಜನತೆ ಭವ್ಯ ಭವಿಷತ್ತಿನ ಸ್ರಷ್ಟಿ ಗೆ ನಾಂದಿಯಾಗ ಬೇಕಾಗಿದೆ .ವಿಜ್ಞಾನ ಪದವಿ ಪಡೆದ ವಿಧ್ಯಾರ್ಥಿ ಜೀವನೋಪಾಯಕ್ಕಾಗಿ ಬ್ಯಾಂಕ್ ಉದ್ಯೋಗದಲ್ಲಿ,ವೈದ್ಯಕೀಯ ಶಿಕ್ಷಣ ಪಡೆದು ಸಂಬಂಧವಿಲ್ಲದ ಖಾತೆಯಲ್ಲಿ ಮುಂದುವರೆದು ಅವನಿಗೂ ಮಾಡಿದ ವ್ರತ್ತಿಯಲ್ಲಿ ಹಿತ ವಿದೆ ನೀವೇ ಹೇಳಿ ?
ನಮ್ಮ ಭಾರತ ಕೃಷಿ ಪ್ರಧಾನ ದೇಶ ಎಷ್ಟು ವಿಧ್ಯಾರ್ಥಿಗಳು ವ್ಯವಸಾಯದ ಬಗ್ಗೆ ಪದವಿ ಪಡೆಯಲು ,ವೈದ್ಯರು ಹಳ್ಳಿಗಳ ಳ್ಳಿ ಸೇವೆ ಮಾಡಿ ಹೆಚ್ಚು ಜನ ಸಂಖ್ಯೆಯ ಹಳ್ಳಿ ಜನರ ಭವಿಷ್ಯದ ಬಗ್ಗೆ ಯೋಚಿಸಿ,ಆದರೆ ಎಲ್ಲರೂ ರಾಜಕಾರಣಿ ಗಳಾಗಿ ಅತೀ ಸ್ವಲ್ಪ ಸಮಯದಲ್ಲಿ ಅವಿಧ್ಯಾವಂತ ರಾಗಿ ವಿಧಾನಸಭೆ/ಸಂಸತ್ತಿನ ಸದಸ್ಯ ರಾಗಲು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಾರೆ .ಇದು ಪ್ರಜ್ಞಾವಂತ ಪ್ರಜೆಗಳಿಗೆ ಬೇಸರ ತಂದಿದೆ ಆಡಳಿತ ಸರಕಾರದ ಪಾರದರ್ಶಕತೆ ಮಾಯವಾಗಿ ಸ್ವಾರ್ಥಿಗಳು ಸೇರಿ ಹಗರಣಗಳ ಮತ್ತು ಭ್ರಷ್ಟಾಚಾರದ ಗೂಡಾಗಿರುವುದು .ಇಲ್ಲಿ ವಿಧ್ಯಾರ್ಥಿಗಳು,ಹೆತ್ತವರು ,ಶಿಕ್ಷಕರು ಮತ್ತು ಸರಕಾರದ ಪಾತ್ರ ಮಹತ್ತರ .
ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಿದೆ.ಉದ್ಯೋಗ ಪೂರ್ವ ಶಿಕ್ಷಣದ ಬಗ್ಗೆ ಯೋಚಿಸಿ ನಿರ್ಧಾರಕ್ಕೆ ಬನ್ನಿ
ಪದವಿ /ಸ್ನಾತಕೋತ್ತರ ವಿಧ್ಯಾಭ್ಯಾಸಕ್ಕೆ ಮೊದಲು ಭವಿಷ್ಯದ ಚಿಂತನೆ ಅಗತ್ಯ .
ಶುಭಾಶಯಗಳು.
ಕುಂದಾಪುರ ನಾಗೇಶ್ ಪೈ .

Wednesday, May 18, 2011

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧಿವೇಶನ

ಕನ್ನಡತನ ಬದುಕಿನಲ್ಲಿ ಹಾಸುಹೊಕ್ಕಾಗ ಬೇಕು ಇಲ್ಲವಾದಲ್ಲಿ ಕನ್ನಡತನ ಸಾಯುತ್ತದೆ .
ಇದು ಅಧ್ಯಕ್ಷ ರಾಗಿ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜ್ ನಲ್ಲಿ ನಡೆದ ಸಂತೋಷ್ ಕುಮಾರ್ ಗುಲ್ವಾಡಿ ವೇದಿಕೆಯಲ್ಲಿ ಶ್ರೀಯುತ ಹಿರಿಯ ನ್ಯಾಯವಾದಿ ಕುಂದಾಪುರದ ಶ್ರೀಯುತ ಮತ್ತು ಸಾಹಿತಿ ಏ ಎಸ್ ಏನ್ ಹೆಬ್ಬಾರ್ ರವರು ಆಡಿದ ಮಾತು ಉದಯವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ
ಕನ್ನಡ ಭಾಷೆಯನ್ನೂ ಜೀವಂತವಾಗಿ ಉಳಿಸಲು ಅಂಗ್ಲ ವ್ಯಾಮೋಹ ಬಿಟ್ಟು ಕರ್ನಾಟಕದಲ್ಲಿಕನ್ನಡಿಗರು ಬೇರೆ ಭಾಷೆಗಳ ಜೊತೆಯಲ್ಲಿ ಮಾತ್ರ ಭಾಷೆ ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕು .ಕನ್ನಡ ಹಾಡುಗಳು ಚಲನಚಿತ್ರ ಗಳನ್ನೂ ನೋಡುವ ಅಭ್ಯಾಸ ಮಾಡಿಕೊಳ್ಳ ಬೇಕು .ವಾರ್ತಾ ಪತ್ರಿಕೆ ಉದಯವಾಣಿ ,ಪ್ರಜಾವಾಣಿ ವಿಜಯ ಕರ್ನಾಟಕ ಸಂಜೆ ಸಂಜೆವಾಣಿ ಮತ್ತು ಕನ್ನಡ ವಾರ ಪತ್ರಿಕೆ ಕುಂದಪ್ರಭ ,ಸುಧಾ ಇತ್ಯಾದಿ ಗಳನ್ನೂ ಓದುವುದು /ಲೇಖನ ಬರೆಯುವುದು ಕನ್ನಡ ಭಾಷೆಗೆ ನಮ್ಮ ಕರ್ತವ್ಯವಾ ಗಿದೆ .ಮನೆಯಲ್ಲಿ ಶಾಲೆಗಳಲ್ಲಿ ದಿನ ನಿತ್ಯ ಕನ್ನಡ ಮಾತಾಡುವುದು ,ಓದುವುದು ಮಾಡಿದರೆ ಕನ್ನಡ ಭಾಷೆ ಜೀವಂತವಾಗಿ ಇರಲು ಸಾಧ್ಯ ಎನ್ನುವ ಮಾತನ್ನು ನಡೆದ ಸಭೆಯಲ್ಲಿ ಶ್ರೀಯುತ ಹೆಬ್ಬಾರ್ ರವರು ಒತ್ತಿ ಹೇಳಿದರು .
ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನ ಕೊಟ್ಟಿರುವುದನ್ನು ನಾವು ಮರೆಯ ಬಾರದು .ಮರ್ಯಾದೆ ಉಳಿಸಿಕೊಳ್ಳುವ ಕನ್ನಡಿಗರ ಮೇಲೆ ಇದೆ
ಇನ್ನಾದರೂ ಎಚ್ಚೆತ್ತು ಕನ್ನಡ ಭಾಷೆಗೆ ನಾವು ಸಲ್ಲಿಸಬೇಕಾದ ಕನ್ನಡ ವೇ ನಮ್ಮ ನಡೆ ,ನುಡಿ ಸರ್ವಸ್ವವೂ ಪದಗಳನ್ನೂ ಕಾರ್ಯರೂಪಕ್ಕಿಳಿಸುವ ಪ್ರಯತ್ನ ಮಾಡೋಣ ಬನ್ನಿ .
ಜೈ ಕರ್ನಾಟಕ ಮಾತೆ
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಲೇಖನಗಳನ್ನೂ ಇ ಮೂಲ ಉದ್ದೇಶಕ್ಕಾಗಿ ಪ್ರಾರಂಭಿಸಿರು ತ್ತೇವೆ
ಯುವಜನತೆ ಯನ್ನು ಒಂದು ಕಡೆ ಸೇರಿಸಿಕೊಂಡು ಪ್ರಗತಿ ಮಾರ್ಗದ ಕಡೆ ಸಾಗೋಣ ರಾಜ್ಯ /ರಾಷ್ಟ್ರ ಕ್ಕೆ ನಾವು ಮಾಡಬೇಕಾದ ಕೆಲಸಗಳು ತುಂಬಾ ಇವೆ ಉದಾಸೀನತೆ ಬೇಡ .ನಮ್ಮ ಭಾಷೆಯ ಬಗ್ಗೆ ಭಾಷಾಭಿಮಾನ ಇರಲಿ.
ಕನ್ನಡ ಜನತೆಗೆ ಕೈ ಜೋಡಿಸುವ

ಕುಂದಾಪುರ ನಾಗೇಶ್ ಪೈ

Friday, May 6, 2011

ಒಸಾಮಾ ಬಿನ್ ಲಾಡೆನ್ ಇನ್ನು ಚರಿತ್ರೆಯ ಪುಟದಲ್ಲಿ ಮಾತ್ರ

ಪಾಪಿಗಳ ಸಂಹಾರ ನಿಶ್ಚಿತ . ಇದು ಸತ್ಯ .
ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಅರ್ಜುನನಿಗೆ ಭೋದಿಸಿದರು.
ದಾಯಾದಿಗಳಾ ದರು ಮೋಸ ,ಕಪಟ ತನದಿಂದ ರಾಜ್ಯ ಕಿತ್ತು ಕೊಂಡು ಅಧರ್ಮದಿಂದ ನಡೆದ ಕವ್ರವರಿಗೆ ಅಂತ್ಯ ಕಾಣಿಸು .
ಯಾವುದೇ ಧರ್ಮದವರು ಇದ್ದರೂ ದೇವರು ಒಬ್ಬನೇ ಧಾರ್ಮಿಕ ವಿಧಿ ಗಳು ಬೇರೆ ಬೇರೆ ಯಾಗಿವೆ .
ಶ್ರೀ ಮಹಾ ವಿಷ್ಣುವು ದಶಾವತಾರಗಳಲ್ಲಿ ಅಸುರರನ್ನು ಅಂತ್ಯ ಕಾಣಿಸಿ ಧರ್ಮದ ರಕ್ಷಣೆ ಮಾಡಿರುವುದನ್ನು ಪುರಾಣದ ಪುಟಗಳಲ್ಲಿ ಓದಿರುತ್ತೀರಿ .ಪಾಪಿಗಳ ಸಾವು ತಡವಾದರೂ ಬಂದೇ ಬರುತ್ತದೆ .
ಪಾಪದ ಕೊಡ ತುಂಬುವವರೆಗೂ ಸಮಯ ಕೊಟ್ಟು ಕೊನೆಗೊಮ್ಮೆ ಸಾವು ಬರುತ್ತದೆ.
ಇನ್ನು ಚರಿತ್ರೆ ಬಗ್ಗೆ ನೋಡಿದರೆ ಹಿಟ್ಲರ್ ,ಸದ್ದಾಂ ಹುಸ್ಸೇನ್ ಇತ್ತೀಚಿಗೆ ಪಾಕಿಸ್ತಾನದಲ್ಲಿ ಅಡಗಿರುವ ಒಸಾ ಮ ಬಿನ್ ಲಾಡೆನ್ ಕತೆ ಮುಗಿದು ಚರಿತ್ರೆ ಯ ಪುಟ ಗಳಲ್ಲಿ ಸೇರಿದೆ .ಒಂದು ಮುಖ್ಯವಾದ ವಿಷಯವೆಂದರೆ ಇ ಪಾಪಿಗಳು ಜಿರಳೆ ಮತ್ತು ತಿಗಣೆ ಜಾತಿಯವು .ಇಲ್ಲಿ ರಕ್ತ ಬೀಜಾ ಸುರನ ನೆನಪಾಗುತ್ತದೆ .ಇವರ ಸಂತಾನ ನಾಶಕ್ಕಾಗಿ ಎಸ್ಟೆ ಕ್ರಿಮಿನಾಶಕದ ಸಿಂಪಡಿಸಿದರು ಮೂಲೆಯಲ್ಲಿ ಇರುವ ಒಂದು ತನ್ನ ಕುಟುಂಬ ಬೆಳೆಸಿ ಜನರ ನಿದ್ರೆ ಹಾಳು ಮಾಡುವುದು ಖಚಿತ .
ನಮ್ಮ ಭಾರತದ ಪ್ರಜೆಗಳು ಎಚ್ಚರಿಕೆಯಿಂದ .ಮುಂದಾಗುವ ಘೋರ ಪರಿಣಾಮ ಗಳಿಗೆ ದಿಟ್ಟ ಉತ್ತರ ನೀಡುತ್ತಾರೆ .
ಎನ್ನುವ ಭರವಸೆ ನಮಗಿದೆ.
ನಮ್ಮ ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರಕಾರಗಳು ಯಾವುದೇ ರಾಜಕೀಯ ಪ್ರತಿರೋಧ ಮಾಡದೇ ಸಹಕರಿಸಿ ದೇಶದ ಭದ್ರತೆಯನ್ನು ಭಯೋತ್ಪಾದಕರಿಂದ ಕಾಪಾಡಲು ಸರ್ವ ಪ್ರಯತ್ನ ಮಾಡಬೇಕು .
ಪ್ರಜೆಗಳ ಒಗ್ಗಟ್ಟಿನ ಮಂತ್ರ ದೇಶದ ರಕ್ಷಣೆಯ ಯಂತ್ರವಾ ಗಿರಲಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ
ಕರ್ನಾಟಕದಲ್ಲಿ
ಚಾಮರಾಜನಗರದ ಕಾಡು ಪ್ರದೇಶದಲ್ಲಿ ವೀರಪ್ಪನ್ ಏನ್ ಕೌಂಟರ್ ನಲ್ಲಿ
ಕೋಣನಕುಂಟೆಯ ಬೆಂಗಳೂರಿನಲ್ಲಿ ಶಿವರಸನ್ ಸಾವು ಕನ್ನಡಿಗರು ಮರೆಯಲಾರ ರು



.
ಸತ್ಯ ಮೇವ ಜಯತೇ
ಜೈ ಹಿಂದ್
ಕುಂದಾಪುರ ನಾಗೇಶ್ ಪೈ .