Sunday, April 11, 2010

ಕಳೆದು ಹೋಗಿದೆ ದಯವಿಟ್ಟು ಹುಡುಕಲು ಸಹಾಯ ಮಾಡಿ

ಭವ್ಯ ಭಾರತದ ನವ ನಿರ್ಮಾಣ ವೇದಿಕೆಯ
ವ್ಯಕ್ತಿತ್ವ ವಿಕಾಸ ಮಾಲಿಕೆ ಮುಂದುವರಿಯುವುದು .
ವಿಷಯ : ಕಳೆದು ಹೋಗಿದೆ ದಯವಿಟ್ಟು ಹುಡುಕಿ ಕೊಡಿ.
ತಿಳಿಸಿ ಸಂಪರ್ಕ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
೨ ನಮ್ಮ ಸುಂದರ ಮೈಸೂರು .
೩ ಚಂದನ ವಾಹಿನಿ ಸಂಪರ್ಕ ಸೇತು [ಆರ್ಕುಟ್ ಸಮುದಾಯ [ಕಮ್ಯುನಿಟಿ ]
ಇಳಿ ವಯಸ್ಸಿನ ಅಜ್ಜಿ ಕೋಲು ಊರಿ ಬಗ್ಗಿ ನಡೆದು ಪಕ್ಕದ ದೇವಸ್ಥಾನಕ್ಕೆ ಹೋಗುವಾಗ ಶಾಲೆಗೆ ಹೋಗುವ ಬಾಲಕ ತಮಾಷೆ ಮಾಡಲು [ಅಜ್ಜಿ ಅಜ್ಜಿ ಬಗ್ಗಿ ಎನು ಹುಡುಕು ತ್ತಿಯ ಎಂದು ಪ್ರಶ್ನಿಸಿದ ]
ಜಾಣ ಅಜ್ಜಿ [ಮರಿ ಕಳೆದು ಹೋಗಿದೆ ಹುಡುಕುತ್ತಿದ್ದೇನೆ ]
ಹುಡುಗ [ಎನು ಕಳೆದಿದೆ ನಾನು ಸಹಾಯ ಮಾಡಲೇ ]
ಅಜ್ಜಿ [ನನ್ನ ಬಾಲ್ಯ ,ಸೌಂದರ್ಯ ಅರೋಗ್ಯ ಮತ್ತು ಸಂಪತ್ತು ಎಲ್ಲಾ ಕಳೆದಿದೆ ಸ್ವಲ್ಪ ಪುನಃ ಸಿಗುವ ಹಾಗೇ ಮಾಡು ಮರಿ ]
ಹುಡುಗ ಮರು ಮಾತಾಡದೆ ಕಂಬಿ ಕಿತ್ತ .
ಅಜ್ಜಿ ದೇವಸ್ಥಾನದ ಕಡೆ ನಡೆದಳು .[ಮನಸ್ಸಿನಲ್ಲಿ ದೇವರೇ ಇ ಮಕ್ಕಳಿಗೆ ಒಳ್ಳೆ ಬುದ್ಧಿ ಕೊಡು ]
ತಾತ್ಪರ್ಯ ;
ಅಜ್ಜಿಗೆ ಮಕ್ಕಳ ಮತ್ತು ಮರಿ ಮಕ್ಕಳ ಮೇಲೆ ಇನ್ನೂ ಮಮತೆ ,ಕಾಳಜಿ ಇದೆ .
ಆದರೆ ಮಕ್ಕಳು ಹೆತ್ತವರನ್ನು ವ್ರದ್ಧಾಶ್ರಮದ ದಾರಿ ತೋರಿಸುತ್ತಾರೆ .
ಕಳೆದು ಹೋದ ಜೀವನ ಮತ್ತೆ ಪಡೆಯಲು ಸಾಧ್ಯವಿಲ್ಲ .
ವಿದೇಶ ದೇಶ ಗಳಲ್ಲಿ ಹೆತ್ತವರನ್ನು ತಮ್ಮ ಸ್ವಾರ್ಥ ಕ್ಕಾಗಿ ಬಳಸಲು ಪ್ರಯತ್ನಿಸುತ್ತಾರೆ.
ಉದ್ಯೋಗ ದಲ್ಲಿ ಇರುವಾಗ ,ನಡತೆ ,ಪರಸ್ಪರ ಹೊಂದಾಣಿಕೆ ,ಆಸಕ್ತಿ ಇತ್ಯಾದಿ ಎಲ್ಲಿ ಹೋಗಿದೆ .
ಅಂತರ್ಜಲ ಯುಗದಲ್ಲಿ ಕೇವಲ ಯಾಂತ್ರಿಕ ಯುಗದಲ್ಲಿ ಮಾನವೀಯತೆ ,ದೇವರು ಗುರು ಹಿರಿಯರ ಮೇಲಿನ ಭಯ ,ಭಕ್ತಿ ,ಶಿಸ್ತಿನ ಜೀವನ ಸಮಯ ಪ್ರಜ್ಞೆ ಹೀಗೆ ಹಲವು ವಿಷಯಗಳು ಶಬ್ದ ಕೋಶದಲ್ಲಿ ಉಳಿದು ನಿಜ ಜೀವನದಲ್ಲಿ ಕಳೆದು ಹೋಗಿದೆ .ಆದರೂ ನಮಗೆ ಯುವ ಜನತೆಯ ಮೇಲೆ ಪುನಃ ಉದಯವಾಗುವ ಆಶಾಕಿರಣ ಮತ್ತು ನಂಬಿಕೆ ಇನ್ನೂ ಜೀವಂತ ವಾಗಿದೆ .
ಕಾದು ನೋಡೋಣ .
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home