Friday, April 30, 2010

ಕಾರ್ಮಿಕರ ದಿನಾಚಾರಣೆ ಮೇ ೧ ಅರ್ಥ ಪೂರ್ಣ ವಾಗಲೀ

ಕಾರ್ಮಿಕರ ದಿನಾಚರಣೆ ಮೇ ೧ ಆಚರಿಸುವ ಬಗೆ ಮತ್ತು ಉದ್ದೇಶಗಳು .
ಸಂಘಟನೆ ಯಲ್ಲಿ ಶಕ್ತಿ ಇದೆ .
ವಿಶ್ವದಲ್ಲಿ ಜನ ಸಂಖ್ಯೆಯಲ್ಲಿ ಅತೀ ದೊಡ್ಡ ದೇಶ ಚೀನ ಇದು ಮಾದರಿ ಯಾಗಿದೆ .
ಇಲ್ಲಿ ಪ್ರಜೆಗಳು ಮನೆ ಮನೆಯಲ್ಲಿ ತಯಾರಿಸಲ್ಪಟ್ಟ ಸಾಮಗ್ರಿಗಳು ವಿಶ್ವದ ಹೆಚ್ಚಿನ ದೇಶ ಗಳಲ್ಲಿ ಕಡಿಮೆ ಬೆಲೆಯಲ್ಲಿ ಮಾರುತ್ತಾರೆ .ಸರಕುಗಳು ಅಧಿಕ ಸಂಖ್ಯೆಯಲ್ಲಿ ತಯಾರಿಸಿದ್ದು ವಿದೇಶಗಳಲ್ಲಿ ಮಾರಿ ಲಾಭ ಪಡೆಯುತ್ತಾರೆ .ಇ ದೇಶದ ಜನರು ಶ್ರಮ ಜೀವಿಗಳು .
ನಮ್ಮ ಭಾರತದಲ್ಲಿ ಇವರ ಸಾಮಗ್ರಿ ಗಳು ಕಮ್ಮಿ ಬೆಲೆಯಲ್ಲಿ ಸಿಗುತ್ತದೆ .
ತಾತ್ಪರ್ಯ : ದುಡಿಮೆಯಲ್ಲಿ ಸಂತಸವಿದೆ ಹಾಗೂ ಹಣ ಸಂಪಾದನೆ ಇದೆ .
ಇ ಗುರಿಯನ್ನು ಕಾರ್ಮಿಕರ ದಿನಾಚರಣೆಯಲ್ಲಿ ಪ್ರತಿಯೊಬ್ಬ ನಾಗರೀಕನು ಗಮನಿಸ ಬೇಕು .
ಕೇವಲ ರಜಾದಿನ ವೆಂದು ಮನೆಯಲ್ಲಿ ಟಿವಿಯ ಮುಂದೆ ಕೂತು ಅಥವಾ ಚಲನ ಚಿತ್ರ ಗಳಲ್ಲಿ ಕಾಲ ಕಳೆಯುವುದು ಸರಿಯಲ್ಲ .ಎಲ್ಲಾ ಕಾರ್ಮಿಕರು ಒಂದು ಕಡೆ ಸೇರಿ ತಮ್ಮ ಉದ್ಯೋಗ ದಲ್ಲಿ ದುಡಿಯುವ ಮತ್ತು ಅಧಿಕ ಲಾಭ ಬರಲು ಹೇಗೆ ಬದಲಾವಣೆ ತರಬಹುದು.ಕಾರ್ಮಿಕರ ಕುಟುಂಬಕ್ಕೆ ಎನು ಅಗತ್ಯವಿದೆ .ಅದು ಮಾಲೀಕ/ಸರಕಾರದಿಂದ ಪಡೆಯಲು ಹೇಗೆ ಸಾಧ್ಯವಿದೆ ? ಎನ್ನುವ ಚಿಂತನೆ ಮಾಡಿ ಕಾರ್ಯಕ್ರಮ ಹಾಕ ಬೇಕು .ಇ ದಿನಾಚರಣೆ ಒಂದು ದಿನಕ್ಕೆ ಸೀಮಿತ ವಾಗದೆ ಕಷ್ಟ ಪಟ್ಟು ದುಡಿಯುವ ಪ್ರವ್ರತ್ತಿ ವರ್ಷ ಪೂರ್ತಿ ಇರಬೇಕು .
ಚಳವಳಿಗಳು ನ್ಯಾಯ ಸಮ್ಮತ ವಾಗಿರ ಬೇಕು .ಸಾರ್ವಜನಿಕ ಆಸ್ತಿ ಪಾಸ್ತಿಗೆ ಹಾನಿಯಾಗದಂತೆ ನಡೆದು ಕೊಂಡು
ಭವ್ಯ ಭಾರತದ ನವ ನಿರ್ಮಾಣ ಮಾಡಬೇಕು .ಮಾಡುವ ಕೆಲಸದಲ್ಲಿ ಸಂತೋಷ ,ಸಂತ್ರಪ್ತಿ ಇರುವಾಗ
ನಮ್ಮ ತಾಯಿನಾಡು ಸುಭಿಕ್ಷ ಆಗುವುದರಲ್ಲಿ ಸಂದೇಹವಿಲ್ಲಾ.
ಕಾರ್ಮಿಕರ ದಿನಾಚರಣೆ ಅರ್ಥಪೂರ್ಣ ವಾಗಲೀ ದೇಶ ಪ್ರಗತಿ ಪತದತ್ತ ಸಾಗಲಿ ಎಂದು ಸದಾ ಹಾರೈಸುವ
ನಿವ್ರತ್ತ ಬ್ಯಾಂಕ್ ಅಧಿಕಾರಿ ಮತ್ತು ಮಾಜಿ ಪದಾಧಿಕಾರಿ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ
ಕುಂದಾಪುರ ನಾಗೇಶ್ ಪೈ

0 Comments:

Post a Comment

Subscribe to Post Comments [Atom]

<< Home