ನಮ್ಮ ರಾಜ್ಯದ/ರಾಷ್ಟ್ರದ ಕಲೆ ಮತ್ತು ಸಂಸ್ಕ್ರತಿಗೆ ಇಂದಿನ ಪೀಳಿಗೆಯ ಪ್ರೋತ್ಸಾಹದ ಅವಶ್ಯಕತೆ ಇದೆ .
ವ್ಯಕ್ತಿತ್ವ ವಿಕಾಸ ಮಾಲಿಕೆ ಮುಂದುವರಿಯುತ್ತದೆ
ನಮ್ಮ ಕರ್ನಾಟಕದ/ಭವ್ಯ ಭಾರತದ ಪ್ರಾಚೀನ ಕಲೆ ಮತ್ತು ಸಂಸ್ಕ್ರತಿ ಮೇಣದ ಬತ್ತಿ ಉರಿಯುವಾಗ ಕರಗುವ ರೀತಿಯಲ್ಲಿ ಕಣ್ಮರೆಯಾಗುತ್ತಿದೆ.ಇದನ್ನು ಕೆಲವು ಹಳೆಯ ಪೀಳಿಗೆಯವರು ಗಮನಿಸಿ ಪುನರ್ನಿರ್ಮಾಣಕ್ಕೆ ತಕ್ಕ ಮಾರ್ಗೋಪಾಯಗಳ ಬಗ್ಗೆ ಚಿಂತಿಸಿ ಇಂದಿನ ಯುವಜನತೆಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ.
ಇಲ್ಲಿ ವಿಶೇಷವೇನೆಂದರೆ ನಮ್ಮ ಕಲೆ ,ಯೋಗ ಮತ್ತು ಸಂಸ್ಕ್ರತಿಯ ಮಹತ್ವ ಅರಿತುಕೊಂಡ ವಿದೇಶಿಯರಿಗೆ
ನಮ್ಮ ಭಾರತದಲ್ಲಿ ನೆಲಸಿ ಸಮರಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ತಾಯ್ನಾಡಿಗೆ ವಾಪಾಸಾಗಿ ಅಲ್ಲಿ ಅಭ್ಯಾಸಕ್ಕೆ ಪ್ರಾರಂಬಿ ಸುವರು .
ಆದರೆ ನಮ್ಮವರ ಕಥೆ ಬೇರೆಯಾಗಿದೆ .
ನಮ್ಮ ಶ್ರೀಮಂತ ಕಲೆ ಗಳನ್ನೂ ಬಿಟ್ಟು ಪಾಶ್ಚಾತ್ಯ ಜನರನ್ನು ಹಿಂಬಾಲಿಸುತ್ತಾ ಹೋಗುತ್ತೇವೆ .
ಇಂದಿನ ಅಂತರ್ಜಾಲ ಯುಗದಲ್ಲಿ ಸಮಯದ ಅಭಾವ ,ಉನ್ನತ ವಿಧ್ಯಾಭ್ಯಾಸ ,ಉಧ್ಯೋಗ ಮತ್ತು ಕುಟುಂಬ ನಿರ್ವಹಣೆ ಕೊನೆಯಾದಾಗಿ ವಿಲಾಸಿ ಜೀವನಕ್ಕೆ ಜೋತುಬಿದ್ದು ನಮ್ಮ ಇ ಪೀಳಿಗೆಗೆ ಕಲೆ,ಸಂಸ್ಕ್ರತಿ ಯ ಅಭಿವೃಧ್ಧಿಯ ಕನಸು ಸಾಕಾರ ವಾಗಲು ಸಾಧ್ಯವಿಲ್ಲ.
೧ ಜನಪದ
೨ ನ್ರತ್ಯ
೩ ನಾಟಕ
೪ ಯಕ್ಷಗಾನ
ಉಪ್ಪಿನ ಕುದ್ರು ಕಾಮತರ ಯಕ್ಷಗಾನ ಗೊಮ್ಬೇಯಾಟ ,ಹೂ ಕೋಲು ,ತಾಳ ಮದ್ದಳೆ
೫ ಭಜನೆ ಮತ್ತು ದಾಸರ ಕೀರ್ತನೆಗಳು
೬ ಡಾ ಶಿವರಾಂ ಕಾರಂತರ ಯಕ್ಷಗಾನ
ಕಬಡ್ಡಿ ಇತ್ಯಾದಿ ಪಂದ್ಯಗಳು
೭ ರೈತರು ಕೆಸರು ಗದ್ದೆಯಲ್ಲಿ ಆಡುವ ಪಂದ್ಯ ಕಂಬಳ ಇತ್ಯಾದಿ
ಗ್ರಾಮೀಣರು ನಡೆದ ಬಂದ ಕಲೆ ,ಸಂಸ್ಕ್ರತಿಗೆ ಪ್ರೋತ್ಸಾಹ ಉತ್ಸಾಹಿ ತರುಣರಿಂದ ಹಾಗೂ ಆಡಳಿತ ಸರಕಾರದಿಂದ ಬೇಕಾಗಿದೆ
ಆದರೆ ಹಗರಣಗಳು ,ಮೋಸ ವಂಚನೆ ರಸ್ತೆಯ ಅಪಘಾತ ದಿನೇ ದಿನೇ ಏರುತ್ತಿವೆ .
ರಾಜಕೀಯ ಜಗಳ ವನ್ನು ಬಿಟ್ಟು ಪಕ್ಷಾತೀತವಾಗಿ ಕಲೆ ಮತ್ತು ಸಂಸ್ಕ್ರತಿ ಯನ್ನೂ ಬೆಳೆಸುವುದೇ ನಮ್ಮ ಆದ್ಯ ಕರ್ತವ್ಯಗಳು ಎಂದು ತಿಳಿದು ಮನಸಾರೆ ಶ್ರಮಿಸಿದಾಗ ನಮ್ಮ ನಿರ್ಮಾಣ ಕಾರ್ಯ ಸಫಲತೆ ಕಾಣುವುದು ನಿಜ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ


0 Comments:
Post a Comment
Subscribe to Post Comments [Atom]
<< Home