Sunday, March 7, 2010

ವ್ಯಕ್ತಿತ್ವ ವಿಕಾಸ ಮಾಲಿಕೆ [ಸಂಗ್ರಹ ]

ಬಾಳು ಹಸನಾಗಲು ಜೀವನ ಶೈಲಿ ಬದಲಾಯಿಸಿ ನೋಡಿ
೧ ಮುಂಜಾನೆ ಬೇಗನೆ ಏಳುವ ಪದ್ಧತಿ ಸುರ್ಯೋದಯಕ್ಕೆ ಮುನ್ನ ಏಳುವುದು
೨ ನಿತ್ಯ ಕರ್ಮಗಳನ್ನು ಮುಗಿಸುವುದು
೩ ಸ್ವಲ್ಪ ಸಮಯ ಆರೋಗ್ಯದ ಕಡೆ ಗಮನ ಕೊಡುವುದು [ಯೋಗಾಸನ ಇತ್ಯಾದಿ ]
೪ ಸಮ ತೂಕದ ಆಹಾರ ಸಸ್ಯಾಹಾರದ ಕಡೆ ಹೆಚ್ಚು ಒಲವು
ಕಚೇರಿ ಕೆಲಸಕ್ಕೆ ಅವಸರ ಅವಸರ ವಾಗಿ ಹೋಗುವ ಕ್ರಮ ಬದಲಾಯಿಸಿ ಹಿಂದಿನ ದಿನವೇ ನಾಳೆ ಏನು ಮಾಡಬೇಕು ಎನ್ನುವ ಪಟ್ಟಿ ಮಾಡಿ ಹ್ರದಯದ ಬಗ್ಗೆ ಮುಂಜಾಗ್ರತೆ ಮಾಡಿಕೊಳ್ಳಿ .
ವಿಶ್ರಾಂತಿ ನೀರು ಗಾಳಿಯ ಕಡೆ ಗಮನ ಕೊಡುವಾಗ ರಾಜಕೀಯ ದಿಂದ ದೂರವಿದ್ದರೆ ಉತ್ತಮ .
ಸಮಯ ಸಿಕ್ಕಿದಾಗ ಪುಸ್ತಕ /ಪತ್ರಿಕೆ ಓದಿ ಜ್ಞಾನ ಭಂಡಾರ ಬೆಳೆಸಿ ಕೊಳ್ಳಿ ಮಿತ್ರರೊಂದಿಗೆ ಹಂಚಿಕೊಳ್ಳಿ .
ವಾಹನ ಓಡಿಸುವಾಗ ನಿಮ್ಮ ಏಕಾಗ್ರತೆ ವಹಿಸಿ ಅಫಘಾತ ವನ್ನು ತಡೆಯಿರಿ .
ಕಡ್ಡಾಯವಾಗಿ ದೇಹಕ್ಕೆ ವಿಶ್ರಾಂತಿ ಕೊಡಿ
ಮಕ್ಕಳು ಹೆತ್ತವರ ಜೊತೆ ಕಾಲ ಕಳೆಯುವುದು ಅವರಿಗೂ ಮನೋರಂಜನೆ ಅವಶ್ಯಕತೆ ಇದೆ ಎನ್ನುವುದು ಮರೆಯದಿರಿ .
ಜೀವನದಲ್ಲಿ ಹಣ ಸಂಪಾದನೆ ಒಂದೇ ಗುರಿಯಲ್ಲ .
ಸ್ವಾರ್ಥವೇ ಮುಖ್ಯವಲ್ಲ ಹಂಚಿ ತಿಂದಾಗ ಸಿಹಿ ಹೆಚ್ಚು .
ತಾಂತ್ರಿಕ ಜೀವನ ದಲ್ಲಿ ಮನುಷ್ಯತ್ವ ಜನರು ಮರೆತಿದ್ದಾರೆ .ಮ್ರಗ ಮತ್ತು ಮನುಷ್ಯರ ನಡುವೆ ಅಂತರ ಕಮ್ಮಿ .
ತಾಳ್ಮೆ ಕಡಿಮೆಯಾಗಿ ಜಗಳ ಪ್ರವ್ರತ್ತಿ ಹೆಚ್ಚುತ್ತಿದೆ .
ಮದುವೆ ಭಂಧನ ವಿವಾಹ ವಿಚ್ಹೆಧನ /ಆತ್ಮ ಹತ್ಯೆ /ಕೊಲೆ ಪ್ರಕರಣ ಪತ್ರಿಕೆ ಗಳಲ್ಲಿ ಓದುತ್ತ ಇದ್ದೇವೆ .
ಸಮಾಜ ಸುಧಾರಣೆ ಸಾಧ್ಯವೇ .
ಚರ್ಚೆ ಮಾತುಕತೆ ಯಿಂದ ಸಮಸ್ಯೆ ಪರಿಹಾರ ವಾಗುವುದಿಲ್ಲವೇ
ತ್ಯಾಗ ಬಲಿದಾನದ ಹೆಸರು ಅಡಗಿ ಹೋಗಿದೆಯೇ
ನಿಧಾನವಾಗಿ ಯೊಚಿಸಿ ಜೀವನ ಶೈಲಿ ಬದಲಾಯಿಸಿ ನೋಡಿ
ಎಲ್ಲರೂ ಸೇರಿ ಭವ್ಯ ಭಾರತದ ನವ ನಿರ್ಮಾಣ ಮಾಡೋಣ ಬನ್ನಿ .
ಜೈ ಹಿಂದ್
ಕುಂದಾಪುರ ನಾಗೇಶ್ ಪೈ

0 Comments:

Post a Comment

Subscribe to Post Comments [Atom]

<< Home