Tuesday, May 18, 2010

ಜೀವನ ಒಂದು ಪಯಣ ನಾವೆಲ್ಲರೂ ಪಯಣಿಗರು .ಅವನೇ ಸೂತ್ರಧಾರ

ನಮ್ಮ ಜೀವನ ಒಂದು ಪಯಣ .ಇಲ್ಲಿ ನಾವೆಲ್ಲರೂ [ಮನುಷ್ಯ ಜಾತಿ ,ಪ್ರಾಣಿಗಳು,ಪಕ್ಷಿಗಳು,ಮೀನುಗಳು ಮತ್ತು ನೀರಿನಲ್ಲಿ ವಾಸಿಸುವ ಇತರೆಲ್ಲಾ] ಜೀವಿಗಳು ಪಯಣಿಗರು .
ರಾಜಕೀಯ ವ್ಯವಹಾರಕ್ಕಾಗಿ ರಾಜ್ಯದ /ಕೇಂದ್ರದ ಮಂತ್ರಿ /ಮುಖ್ಯ ಮಂತ್ರಿ /ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ದೇಶ /ವಿದೇಶ ಗಳಲ್ಲಿ ಸಂಚರಿಸಿ ಸರ್ವತೋಮುಖ ಅಭಿವ್ರದ್ಧಿ ಯನ್ನೂ ಪ್ರವಾಸ ಮತ್ತು ಸಂಬಂಧ ಬೆಳಸುತ್ತಾರೆ .
ಸ್ವಾಮೀಜಿಯವರು ಪಾದ್ರಿಗಳು ದೇಶಾದ್ಯಂತ/ವಿದೇಶಗಳಲ್ಲಿ ಪ್ರವಾಸ ಮಾಡಿ ಧರ್ಮ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗುವರು .
ಒಂದು ಹೆಣ್ಣು ಮದುವೆಯಾಗಿ ಹುಟ್ಟಿದ ಊರನ್ನು ತೊರೆದು ತನ್ನ ಗಂಡನ ಮನೆಯಲ್ಲಿ ಜೀವನ ಪೂರ್ತಿ ನೆಲಸುವಳು .
ಗಂಡು /ಹೆಣ್ಣು ವಿದ್ಯಾರ್ಜನೆಗಾಗಿ ಮತ್ತು ಉದ್ಯೋಗದಲ್ಲಿ ಪ್ರವಾಸ ಮಾಡುತ್ತಾರೆ.
ಪಕ್ಷಿಗಳು [ರಂಗನತಿಟ್ಟು /ಕೊಕ್ಕರೆ ಬೆಳ್ಳೂರು ಇತ್ಯಾದಿ ಪಕ್ಷಿಧಾಮದಲ್ಲಿ ಸಾವಿರಾರು ಮೈಲು ಸಂಚರಿಸಿ ಪಕ್ಷಿಗಳು ತಮ್ಮ ಸಂತಾನ ಹೆಚ್ಚಿಸುತ್ತವೆ
ಜಗತ್ತಿನ ಪ್ರಸಿದ್ದ ಮೈಸೂರು ದಸರಾನಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಂದು ದಸರಾ ಮುಗಿದ ಮೇಲೆ ಕಾಡಿಗೆ ಮರಳುತ್ತವೆ .
ಹೀಗೆ ನೀರಿನಲ್ಲಿ ಮೀನುಗಳು ಯಾವುದೊ ದೇಶದಿಂದ ಯಾವುದೋ ದೇಶಕ್ಕೆ ಹೋಗಿ ಸಂತಾನ ಅಭಿವ್ರದ್ಧಿ ಮಾಡುತ್ತವೆ .ಬೆಕ್ಕು ಹುಟ್ಟಿದ ಮರಿಗಳನ್ನು ೭ ಮನೆಗಳಲ್ಲಿ ಕೊಂಡು ಹೋಗಿ ಪರಿಚಯ ಮಾಡಿಸುತ್ತದೆ .
ಹಾವೂ ತನ್ನ ಆಹಾರಕ್ಕಾಗಿ ಮನೆಯೊಳಕ್ಕೆ ಬಂದು ಜನರಿಗೆ ಗಾಬರಿ ಪಡಿಸುವ ಘಟನೆಗಳು ಇವೆ .
ಸಂಗೀತ /ಕಲಾ/ಚಲನ ಚಿತ್ರ ತಾರೆಯರು ಪ್ರವಾಸ ಮಾಡಿ ತಮ್ಮ ಅಭಿಮಾನಿಗಳಿಗೆ ಸಂತೋಷ ಪಡಿಸುತ್ತಾರೆ .
ಒಲಿಂಪಿಕ್ಸ್ ಕ್ರಿಡೆಗಳಲ್ಲಿ ಕ್ರಿಕೆಟ್ ,ಹಾಕಿ ಇತ್ಯಾದಿಗಳಲ್ಲಿ ಭಾಗವಹಿಸಲು ದೇಶ ವಿದೇಶಗಳಲ್ಲೂ ಪ್ರವಾಸ ಮಾಡಬೇಕು.
ಹೀಗೆ ಸಾಮಾನ್ಯವಾಗಿ ಇಂದಿನ ಪೀಳಿಗೆ ವಿದ್ಯಾಮತ್ತು ಉದ್ಯೋಗದಲ್ಲಿ ದೇಶ /ವಿದೇಶ ಸಂಚಾರ ಮಾಡುವುದರಿಂದ ಹೆತ್ತವರೂ ಮಕ್ಕಳ ಜೊತೆಯಲ್ಲಿ ತಾವೂ ದೇಶ /ವಿದೇಶ ಪ್ರವಾಸ ಮಾಡುವ ಸಂದರ್ಭ ವಾಡಿಕೆಯಲ್ಲಿ ಇರುವುದು .
ನಾನು ಇದಕ್ಕೆ ಹೊರತಾಗಿಲ್ಲ.
ನನ್ನ ಉದ್ಯೋಗದಲ್ಲಿ ದೇಶ ಸಂಚಾರ ಮಾಡಿ ನಮ್ಮ ಮಕ್ಕಳಿಗಾಗಿ ಈಗ ವಿದೇಶ ಪ್ರವಾಸ ಮಾಡುತ್ತಿದ್ದೇನೆ .
ನಮ್ಮ ಜೀವನ ಒಂದು ಪಯಣ .ನಾವೆಲ್ಲರೂ ಪಯಣಿಗರು .
ಇಲ್ಲಿ ಬಹು ಮುಖ್ಯ ವಿಷಯ ವೇನೆಂದರೆ ಒಂದು ರಹಸ್ಯ
ಯಾರಿಗೂ ತಿಳಿಯಲಾಗದು ಜೀವನದ ಕೊನೆಯ ಪಯಣದ ಸಮಯ ಮತ್ತು ದಿನಾಂಕ.
ಆದರೆ ಸುಖಾಂತ್ಯ ಬಯಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home