Friday, March 11, 2011

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ

ವಸುದೈವ ಕುಟುಂಬಕಂ
ವಿಶ್ವ ಒಂದು ಕುಟುಂಬ ಆಗಿದೆ
ಇಲ್ಲಿ ಎಲ್ಲಾ ಭಾಷೆ ಮಾತಾಡುವ ಜನರು ವಾಸಿಸುತ್ತಾರೆ.
ಎಲ್ಲಾ ಜನರಿಗೆ ಇ ಜಗತ್ತಿನಲ್ಲಿ ವಾಸಿಸಲು ಸಮಾನ ಹಕ್ಕಿದೆ .ಆಸ್ತಿ ,ಹಣ ಮತ್ತು ಅಧಿಕಾರಕ್ಕಾಗಿ ಕುಟುಂಬದ ಸದಸ್ಯರುಗಳು ಜಗಳವಾಡುವುದು ನಿರಂತರವಾಗಿ ನಡೆದುಬಂದ ಹಾಗೇ ನೀರಿಗಾಗಿ ,ಇನ್ನಿತರ ಕಾರಣದಿಂದ
ರಾಜ್ಯ /ರಾಷ್ಟ್ರ ಗಳು ಯುದ್ಧ ಮಾಡ ಬಯಸುತ್ತಾರೆ .ವಿಶ್ವದಲ್ಲಿ ಮಹಾಯುದ್ಧ ನಡೆದಿರುವುದನ್ನು ಚರಿತ್ರೆಯಲ್ಲಿಓದಿರುತ್ತೀರಿ .ಮಹಾತ್ಮ ಗಾಂಧೀಜಿ ಮುಂತಾದ ಮಹಾ ಪುರುಷರು ವಿಶ್ವ ಶಾಂತಿಗಾಗಿ ಪ್ರಯತ್ನಿಸಿ ಸಫಲ ರಾಗಿರುವುದು ಇದೆ .
ಮಹಾತ್ಮ ಬುದ್ಧ ,ಜೈನ ಧರ್ಮದ ಅನುಯಾಯಿಗಳು ಶಾಂತಿಯ ಸಂದೇಶ ಪಾಲಿಸಲು ಪ್ರಯತ್ನಿಸುತ್ತಿದ್ದಾರೆ .
ಹಿಂದೂ ಧರ್ಮ ,ಇಸ್ಲಾಂ ಮತ್ತು ಮೂಲ ಕ್ರಿಸ್ಟಿಯನ್ರೂ ವಿಶ್ವ ಶಾಂತಿ ಹಂಬಲಿಸುವಾಗ ಏಕೆ ವಿರೋಧ ?
ಮಮರಾಟಿಗರು ಮತ್ತು ಕನ್ನಡಿಗರು ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಒಂದಾಗಿರುವುದು ನಮಗೆಲ್ಲರಿಗೂ ಹರ್ಷ ತಂದಿದೆ .
ಇದೆ ರೀತಿ ಭಾಂಧವ್ಯ ತಮಿಳು,ತೆಲುಗು ಇನ್ನಿತರ ಭಾಷಿಗರು ಮುಂದುವರಿಸಿದಾಗ ನದಿಗಳ ನೀರಿನ ಹಂಚಿಕೆ ಇತ್ಯಾದಿ ಸಮಸ್ಯೆಗಳು ಬಗೆಹರಿಸಲು ಸಾಧ್ಯ .
ಸರ್ವೆ ಜನ : ಸುಕಿನೋ ಭವಂತು :
ವಿಶ್ವ ಕನ್ನಡ ಸಮ್ಮೇಳನಕ್ಕೆ ಶುಭಾಶಯಗಳು
ಭವ್ಯ ಭಾರತ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ

0 Comments:

Post a Comment

Subscribe to Post Comments [Atom]

<< Home