Monday, May 23, 2011

ಭಾರತೀಯ ಶಿಕ್ಷಣ ಪದ್ಧತಿ ಉದ್ಯೋಗ ಪೂರ್ವ ಸಿದ್ಧತೆಯೇ ಅಥವಾ ಜ್ನನಕ್ಕಾಗಿಯೇ

ನಮ್ಮ ಭಾರತೀಯ ಶಿಕ್ಷಣ ಪದ್ಧತಿ .
ವ್ಯಕ್ತಿತ್ವ ವಿಕಾಸ ಮಾಲಿಕೆಯಲ್ಲಿ
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಇಂದಿನ ವಿಧ್ಯಾಭ್ಯಾಸದ ಮೂಲ ಉದ್ಧೇಶ ಗಳ ಮಾಹಿತಿ ವಿಧ್ಯಾರ್ಥಿಗಳಿಗೆ,ಹೆತ್ತವರಿಗೆ ಶಿಕ್ಷಕರಿಗೆ,ದೇಶದ ಪ್ರಜೆಗಳುಮತ್ತು ಆಳುವ ಸರಕಾರಕ್ಕೆ ತಿಳಿಸ ಬೇಕಾಗಿದೆ .ಕೇವಲ ಹತ್ತನೇ ತರಗತಿ ಓದಿ ಏಕಲವ್ಯನ ಗುರಿ ಇದ್ದ ಹಾಗೇ ಜ್ಞಾನ ಸಂಪಾದನೆ ಒಂದೇ ಮುಖ್ಯ ಎಂದು ತಿಳಿದು ಗ್ರಂಥಾಲಯ,ಪತ್ರಿಕೆ ಅಂತರ್ಜಾಲದ ವೆಬ್ಸೈಟ್ ಗಳಲ್ಲಿ ಮಾಹಿತಿ ಕಲೆ ಹಾಕಿ ತಿಳಿದು ಜಿರ್ಣೀಸಿ ಇನ್ನೊಬ್ಬರಿಗೆ ಕಲಿಸುವ ಶಕ್ತಿ ಉಳ್ಳವರು ನಮ್ಮ ದೇಶದಲ್ಲಿ ಕೊರತೆ ಇಲ್ಲಾ .ಅವರು ಪ್ರದರ್ಶನ ಮಾಡುವುದಿಲ್ಲ .ಭಾರತದ ಪ್ರತಿಯೊಬ್ಬ ಪ್ರಜೆಗೆ ಶಿಕ್ಷಣ ಅಗತ್ಯ .ಇದರಿಂದ ವ್ಯಕ್ತಿತ್ವ ವಿಕಾಸ ವಾಗ ಬೇಕೇ ವಿನಃ ಭಯೋತ್ಪಾದನೆ ,ವಿಶ್ವ ನಾಶಕ್ಕೆ ಮಾರ್ಗ ವಾಗಿರ ಬಾರದು ಯುವಜನತೆ ಭವ್ಯ ಭವಿಷತ್ತಿನ ಸ್ರಷ್ಟಿ ಗೆ ನಾಂದಿಯಾಗ ಬೇಕಾಗಿದೆ .ವಿಜ್ಞಾನ ಪದವಿ ಪಡೆದ ವಿಧ್ಯಾರ್ಥಿ ಜೀವನೋಪಾಯಕ್ಕಾಗಿ ಬ್ಯಾಂಕ್ ಉದ್ಯೋಗದಲ್ಲಿ,ವೈದ್ಯಕೀಯ ಶಿಕ್ಷಣ ಪಡೆದು ಸಂಬಂಧವಿಲ್ಲದ ಖಾತೆಯಲ್ಲಿ ಮುಂದುವರೆದು ಅವನಿಗೂ ಮಾಡಿದ ವ್ರತ್ತಿಯಲ್ಲಿ ಹಿತ ವಿದೆ ನೀವೇ ಹೇಳಿ ?
ನಮ್ಮ ಭಾರತ ಕೃಷಿ ಪ್ರಧಾನ ದೇಶ ಎಷ್ಟು ವಿಧ್ಯಾರ್ಥಿಗಳು ವ್ಯವಸಾಯದ ಬಗ್ಗೆ ಪದವಿ ಪಡೆಯಲು ,ವೈದ್ಯರು ಹಳ್ಳಿಗಳ ಳ್ಳಿ ಸೇವೆ ಮಾಡಿ ಹೆಚ್ಚು ಜನ ಸಂಖ್ಯೆಯ ಹಳ್ಳಿ ಜನರ ಭವಿಷ್ಯದ ಬಗ್ಗೆ ಯೋಚಿಸಿ,ಆದರೆ ಎಲ್ಲರೂ ರಾಜಕಾರಣಿ ಗಳಾಗಿ ಅತೀ ಸ್ವಲ್ಪ ಸಮಯದಲ್ಲಿ ಅವಿಧ್ಯಾವಂತ ರಾಗಿ ವಿಧಾನಸಭೆ/ಸಂಸತ್ತಿನ ಸದಸ್ಯ ರಾಗಲು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಾರೆ .ಇದು ಪ್ರಜ್ಞಾವಂತ ಪ್ರಜೆಗಳಿಗೆ ಬೇಸರ ತಂದಿದೆ ಆಡಳಿತ ಸರಕಾರದ ಪಾರದರ್ಶಕತೆ ಮಾಯವಾಗಿ ಸ್ವಾರ್ಥಿಗಳು ಸೇರಿ ಹಗರಣಗಳ ಮತ್ತು ಭ್ರಷ್ಟಾಚಾರದ ಗೂಡಾಗಿರುವುದು .ಇಲ್ಲಿ ವಿಧ್ಯಾರ್ಥಿಗಳು,ಹೆತ್ತವರು ,ಶಿಕ್ಷಕರು ಮತ್ತು ಸರಕಾರದ ಪಾತ್ರ ಮಹತ್ತರ .
ಶಿಕ್ಷಣದಲ್ಲಿ ಬದಲಾವಣೆ ಅಗತ್ಯವಿದೆ.ಉದ್ಯೋಗ ಪೂರ್ವ ಶಿಕ್ಷಣದ ಬಗ್ಗೆ ಯೋಚಿಸಿ ನಿರ್ಧಾರಕ್ಕೆ ಬನ್ನಿ
ಪದವಿ /ಸ್ನಾತಕೋತ್ತರ ವಿಧ್ಯಾಭ್ಯಾಸಕ್ಕೆ ಮೊದಲು ಭವಿಷ್ಯದ ಚಿಂತನೆ ಅಗತ್ಯ .
ಶುಭಾಶಯಗಳು.
ಕುಂದಾಪುರ ನಾಗೇಶ್ ಪೈ .

0 Comments:

Post a Comment

Subscribe to Post Comments [Atom]

<< Home