Friday, August 20, 2010

ವ್ಯಕ್ತಿತ್ವ ವಿಕಾಸ ಮಾಲಿಕೆ

ಇದು ವ್ಯಕ್ತಿತ್ವ ವಿಕಾಸ ಮಾಲಿಕೆ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ
ಮುಂದುವರಿಯುವುದು.
ನಿನ್ನೆ ಮಾಧ್ಯಮಗಳ ಸಂವಾದ ಏಟು ಇದಿರೆಟು ಕಾರ್ಯಕ್ರಮದಲ್ಲಿ
ಎಲ್ಲಾ ರಾಜಕೀಯ ಪಕ್ಷಗಳು ,ಯುವ ಸಂಘಟನೆಗಳು ಭಾಗವಹಿಸಿದ್ದವು .
ವಿಷಯ :ರಾಜಕೀಯಕ್ಕೆ ಯುವಜನತೆಯ ಸಕ್ರಿಯ ಪಾತ್ರ .
ಎಲ್ಲರೂ ಒಂದಾಗಿದ್ದು ರಾಜ್ಯ /ರಾಷ್ಟ್ರ ಮಟ್ಟದಲ್ಲಿ
ಯುವಜನತೆ ಪಾಲುದಾರರಾಗಲಿ ಮತ್ತು ಅಭಿವ್ರದ್ಧಿಯ ಕಡೆ ಮುನ್ನಡೆಯಲಿ
ಪಕ್ಷಗಳ ತಿರ್ಮಾನ ಸ್ವಂತ ವಿಷಯವಾಗಿದ್ದು ಪ್ರಜಾತಂತ್ರದಲ್ಲಿ ಅವರವರಿಗೆ ಇಷ್ಟವಾದ ಸಿದ್ಧಾಂತದ ದಾರಿಯಲ್ಲಿ ಮುನ್ನಡೆಯಲಿ .ವೋಟು ಬ್ಯಾಂಕ್ ರಾಜಕೀಯ ಮಾಡಬಾರದು.
ಮುಂದಿನ ಪೀಳಿಗೆಯ ಸರ್ಕಾರ ರಚಿಸುವ ಅಧಿಕಾರ ಕೊಡಬೇಕು .ನುರಿತ ಹಿರಿಯ ಪ್ರಜೆಗಳು
ತಮ್ಮ ಅನುಭವ ದಿಂದ ಯುವಜನತೆಯ ಮಾರ್ಗದರ್ಶನ ಕೊಡಬೇಕು .
ವಿಧಾನ ಮಂಡಲ /ಸಂಸತ್ತಿನಲ್ಲಿ ಮಹಿಳೆಯರು ಮತ್ತು ಯುವಜನತೆ ಭಾಗವಹಿಸಲು ಅನುವು ಮಾಡಿ ಕೊಟ್ಟಾಗ ಪ್ರಜಾಪ್ರಭುತ್ವ ಶಬ್ದಕ್ಕೆ ಸರಿಯಾದ ಅರ್ಥ ಬರುತ್ತದೆ .
ಶಿಕ್ಷಣದಲ್ಲಿ ಪ್ರಾಮುಖ್ಯತೆ ಕೊಡಬೇಕು .
ತನ್ಮಧ್ಯೆ ರಾಜಕೀಯ ವಿದ್ಯಮಾನಗಳಲ್ಲಿ ಸಂಪೂರ್ಣ ತಾಜಾ ಸುದ್ಧಿಗಳನ್ನು ತಿಳಿದುಸಮಯಕ್ಕೆ ಸರಿಯಾಗಿ ಸರಕಾರಕ್ಕೆ
ಆಡಳಿತದಲ್ಲಿ ಕಾರ್ಯಕ್ರಮ ರೂಪಿಸಲು ಮಾಹಿತಿ/ಸಲಹೆ ಕೊಟ್ಟು ಸಹಾಯ ಮಾಡಬೇಕು .
ದೇಶಭಕ್ತಿ ಕೇವಲ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ದಿನಾಚರಣೆಗೆ ಸೀಮಿತವಾಗದೇ ರಕ್ತಗತವಾಗಿ ವರ್ಷಪೂರ್ತಿ ಇರಬೇಕು .
ಯುವಜನತೆ ಆಡಳಿತ ಮತ್ತು ವಿರೋಧಪಕ್ಷಗಳಿ ಗೆ ಸಹಕಾರ ನೀಡುತ್ತಾ ರಾಜ್ಯ /ರಾಷ್ಟ್ರ ದ ವಿಕಾಸದತ್ತ ಮುನ್ನಡೆಯಲಿ .
ಸರ್ವೆ ಜನ ಸುಕಿನೋ ಭವಂತು :
ಕುಂದಾಪುರ ನಾಗೇಶ್ ಪೈ
ಶ್ರಾವಣದ ಎಲ್ಲಾ ಹಬ್ಬ ಗಳಿಗೆ ಶುಭಾಶಯಗಳು.