Monday, August 29, 2011

ಜನತೆಯ ಹೋರಾಟ ಎಷ್ಟು ದಿನ ಸಾಗುತ್ತದೆ

ನಮ್ಮ ಸಮಾಜ ,ರಾಜ್ಯದ ಮತ್ತು ರಾಷ್ಟ್ರದ ಜನತೆ ಬೇಡಿಕೆಗಳು ಹೊರಾಟ ವಿಲ್ಲದೇ ಇಡೆರಿಸಲು ಸಾಧ್ಯವಿಲ್ಲವೇ ?
ಇದು ನಮಗೆ ಕಾಡುವ ಬಹು ಮುಖ್ಯ ಪ್ರಶ್ನೆ ಯಾಗಿದೆ .
ಅಣ್ಣಾ ಹಜಾರೆ ಯವರ ಉಪವಾಸ ಸತ್ಯಾಗ್ರಹ ಅರ್ಧ ಜಯ ದೊಂದಿಗೆ ಮುಕ್ತಾಯ .
ಚಳವಳಿ ಮುಂದು ವರಿಯುವುದು .
ಆದರೆ ದಿನೇ ದಿನೇ ಜನರ ಸಮಸ್ಯೆಗಳು ಹೆಚ್ಚಾಗುವ ಕಾರಣ ಜನತೆ ಶಾಂತಿಯುತ ಹೊರಾಟ ಮತ್ತು ಸಂಘರ್ಷ ದಾರಿಯಲ್ಲಿ ಸಾಗುವ ಲಕ್ಷಣಗಳು ಕಂಡು ಬಂದಿವೆ .
ಸಾಮಾನ್ಯವಾಗಿ ವಿಧ್ಯಾರ್ಥಿಗಳು.ರೈತರಿಗೆ,ರಾಜಕೀಯ ಪಕ್ಷಗಳು
ತಮ್ಮ ಬೇಡಿಕೆಗೆ ಸರಿಯಾದ ಸಮಾಧಾನ ಸಿಗದೇ ಇರುವ ಕಾರಣ ಇ ಮಾರ್ಗವೇ ಸರಿಯಾದ ಮಾರ್ಗ ಎಂದು ಯೋಚಿಸುತ್ತಾರೆ .ಇಲ್ಲಿ ನಮಗೆ ಹೋರಾಟಕ್ಕಾಗಿ ಬೀದಿಗೆ ಇಳಿಯಲು ಯಾರು ಕಾರಣ :
ನಮ್ಮ ಆಡಳಿತದಲ್ಲಿ ಇರುವ ರಾಜಕಾರಣಿಗಳು/ವಿರೋಧ ಪಕ್ಷಗಳು ಅಥವಾ ಜನತೆಯೇ ?
ಇನ್ನಾದರೂ ಇ ನಮ್ಮ ಪ್ರಶ್ನೆಗೆ ಸಮಾಧಾನ ಸಿಗಲು ಪ್ರಯತ್ನಿಸಿ.
ದಿನ ನಿತ್ಯದ ಜೀವನ ವಹಿವಾಟು ಗಳಿಗೆ ಸಮಯ ವನ್ನು ಅನಿಶ್ಚಿತ ಫಲಿತಾಂಶಕ್ಕಾಗಿ ಹಾಳು ಮಾಡುವುದು ಸರಿಯಲ್ಲ .
ಭವ್ಯ ಭಾರತ ನವ ನಿರ್ಮಾಣ ವೇದಿಕೆ ಪ್ರಕಟಣೆ ಮುಖಾಂತರ ಸಮಸ್ತ ಜನತೆ ಯೊಂದಿಗೆ/ಸರಕಾರವನ್ನು ಕೈ ಮುಗಿದು ಬೇಡಿಕೊಂಡು ಅಮೂಲ್ಯವಾದ ಸಮಯವನ್ನು ದೇಶ ಪ್ರಗತಿ ಪಥ ದತ್ತ ಸಾಗುವಂತೆ ಮಾಡಲಿ .
ಸರ್ಕಾರ ಬಿಗುಮಾನ/ಸ್ವ ಪ್ರತಿಷ್ಠೆ ಬಿಟ್ಟು ಜನತೆಯ ಕಷ್ಟ ಪರಿಹಾರ ಮಾಡುವ ಪ್ರಯತ್ನ ದಲ್ಲಿ ಮುಂದುವರಿದಾಗ ಕಟ್ಟಬಹುದು ನಮ್ಮ ಇ ಭವ್ಯ ಭಾರತ .
ಜನಶಕ್ತಿ ಪ್ರಜಾತಂತ್ರಕ್ಕೆ ಅಡಿಪಾಯ .
ಜೈ ಹಿಂದ್
ಭಾರತ್ ಮಾತಾ ಕೀ ಜೈ
ಕುಂದಾಪುರ ನಾಗೇಶ್ ಪೈ . .
ಎಲ್ಲಾ ಕ್ಷೇತ್ರ ಗಳಿಂದ ಆರಿಸಿಬಂದ ಪ್ರತಿನಿಧಿಗಳು ಸಂಪೂರ್ಣ ಮಾಹಿತಿ ಪಡೆದು ತಮ್ಮ ತಮ್ಮ ಕ್ಷೇತ್ರ ಗಳ ಸರ್ವತೋಮುಖ ಅಭಿವೃಧ್ಧಿ ಗೆ ದುಡಿಯ ಬೇಕು .

Friday, August 19, 2011

ದೇಶದ ಬಲಿಷ್ಟ ಶಕ್ತಿ -ಅಣ್ಣಾ ಹಜಾರೆ .

ಅಣ್ಣಾ ಹಜಾರೆ -ಬ್ರಷ್ಟಾಚಾರ ನಿರ್ಮೂಲನಾ ಯಂತ್ರ.
ಇ ಯಂತ್ರ ಭವ್ಯ ಭಾರತದ ಮೂಲೆ ಮೂಲೆಯಲ್ಲಿ ತನ್ನ ಕಾರ್ಯ ಪ್ರಾರಂಭಿಸಿ ಕೇಂದ್ರ ಸರ್ಕಾರ ತನ್ನ ಬಿಗು ನೀತಿಯನ್ನು ಸಡಿಲಿಸಿ ಪ್ರಬಲ ಜನ ಲೋಕಪಾಲ ಮಸೂದೆಯನ್ನು ಲೋಕಸಭಾ ದಲ್ಲಿ ಮಂಡಿಸಿ ಜಾರಿಗೆ ತರಲು ಪ್ರಯತ್ನಿಸ ಬೇಕಾಗಿದೆ.ಇಲ್ಲವಾದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಹಾದಿಯತ್ತ ದೇಶದ ಜನತೆ ಸಾಗಿದೆ ಎಂದು ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಯು ಪಿ ಏ ಮನವರಿಕೆ ಮಾಡಿಕೊಂಡಿದೆ .
ಅಣ್ಣಾ ಹಜಾರೆ ಸಾಮಾನ್ಯ ಗಾಂಧೀವಾದಿ ಸ್ವಾಂತಂತ್ರ್ಯ ಹೋರಾಟಗಾರ ರಾಗಿರದೆ ನಮ್ಮ ದೇಶದ ಬಲಿಷ್ಟ ಶಕ್ತಿಯಾಗಿ
ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ ಜನತೆಯನ್ನು ಸಂಘಟಿಸಿದ್ದಾರೆ.
ಜಾತಿ ,ಮತ ಹೆಣ್ಣು ಗಂಡು ಮಕ್ಕಳು ಎನ್ನುವ ಭೇಧ ಭಾವನೆ ಇಲ್ಲದೆ ಒಗ್ಗಟ್ಟಾಗಿ ಇಲ್ಲಿ ಸೇರಿರುವುದು ವಿಶೇಷ .
ರಾಜ್ಯಗಳು ಒಟ್ಟಾಗಿ ಚಳವಳಿಯಲ್ಲಿ ಭಾಗವಹಿಸಿ ಭ್ರಷ್ಟಾಚಾರ ಒಂದು ಮಹಾರೋಗ ಇದನ್ನು ಕೊಲ್ಲಲೇ ಬೇಕು ಎಂದು ಪಣ ತೊಟ್ಟಿವೆ .
ನಮ್ಮ ನಿವೇದನೆ ಅಣ್ಣಾ ಹಜಾರೆ ಬೆಂಬಲಿಸಿ ಮತ್ತು ಹೋರಾಟ ದಲ್ಲಿ ಭಾಗವಹಿಸಿ
ನಿಮ್ಮ ಸಂಪೂರ್ಣ ಶಕ್ತಿ ಪ್ರಯೋಗಿಸಿ ಭ್ರಷ್ಟಾಚಾರ ನಿರ್ಮ್ಮೊಲನೆ ಗೆ ಸಹಕರಿಸಿ .
ಇದು ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ಜೈ ಹಿಂದ್
ಅಣ್ಣಾ ಹಜಾರೆ ಜಿಂದಾಬಾದ್
ಕುಂದಾಪುರ ನಾಗೇಶ್ ಪೈ .

Tuesday, August 16, 2011

ಅಣ್ಣಾ ಹಜಾರೆ ಹೋರಾಟ ದಲ್ಲಿ ಸಹಕರಿಸಿ ಮತ್ತು ಕೈ ಜೋಡಿಸಿ

ಇನ್ನೊಂದು ಸಂಗ್ರಾಮಕ್ಕೆ ಭಾರತೀಯರು ಅಣಿ ಯಾಗ ಬೇಕಾಗಿದೆ .
15th August 1947 ರ ಸ್ವಾತಂತ್ರ್ಯ ಸಂಗ್ರಾಮ ಯುದ್ಧ ಆಂಗ್ಲರನ್ನು ' ಭಾರತ ಬಿಟ್ಟು ತೊಲಗಿ '
ಎನ್ನುವ ಯುದ್ಧವಾಗಿ ನಾವು ವಿಜಯಿಯಾಗಿ ೬೫ ನೇ ಸ್ವಾತಂತ್ರ್ಯ ದಿನಾಚಾರಣೆ ಆಚರಿಸಿದೆವು .
ಈಗ ಇನ್ನೊಂದು ಮಹಾ ಯುದ್ಧಕ್ಕೆ ತಯ್ಯಾರಿ ನಡೆಸ ಬೇಕಾಗಿದೆ .
ಇದು ವಿದೇಶಿಯರು ಭಾರತ ಬಿಟ್ಟು ಹೋಗುವ ವಿಷಯವಲ್ಲಾ .
ಬದಲಾಗಿ ನಮ್ಮೆಲ್ಲರ ಮಹಾ ರೋಗ ಬ್ರಷ್ಟಾಚಾರ/.ನಿರ್ಮೂಲನೆ.ಅಗತ್ಯ
ಇದಕ್ಕಾಗಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ.
ಇದನ್ನು ಕೇಂದ್ರದಲ್ಲಿ ಆಡಳಿತ ಸರ್ಕಾರ ಅಣ್ಣಾ ರ ಬಗ್ಗೆ ನಡೆದುಕೊಂಡ ರೀತಿ ಅವಾಮಾನವೀಯ .
ಇದಕ್ಕಾಗಿ ಹೊರಾಡುವ ಅಗತ್ಯ ನಿರ್ಮಾಣ ವಾಗಿದೆ .
ಕೇಂದ್ರ ದ ಪ್ರಧಾನಿ ಮತ್ತು ಅವರ ಮಂತ್ರಿಮಂಡಲದ ಸಂಪುಟ ಸದಸ್ಯರು ವಿನಾಕಾರಣವಾಗಿ ದೇಶದ ಪ್ರಜಾತಂತ್ರದ ಬಗ್ಗೆ ಚೆಲ್ಲಾಟವಾಡುವ ಪ್ರವ್ರತ್ತಿ ಬಿಡಬೇಕು .
ಅಣ್ಣಾ ಭಂಧನ ವಿಮುಕ್ತಿ ಮಾಡು ವುದು ಮತ್ತು ಅವರ ಹೋರಾಟ ಶಕ್ತಿ ಕುಗ್ಗಿಸದೇ ಪ್ರಜಾತಂತ್ರಕ್ಕೆ ಮನ್ನಣೆ ಸಿಗಬೇಕು .
ಇದುವೇ ನಮ್ಮ ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಕೇಂದ್ರದ ಆಡಳಿತ ಸರಕಾರಕ್ಕೆ ನಿವೇದನೆ .
ಒಗ್ಗಟ್ಟಿನಲ್ಲಿ ಬಲವಿದೆ ಎಂದು ವಿಶ್ವಕ್ಕೆ ಭಾರತೀಯರು ತೋರಿಸಿ ವಿಶ್ವದ ಅತಿದೊಡ್ಡ ಪ್ರಜಾ ಪ್ರಭುತ್ವ ಎಂದು ತೋರಿಸ ಬೇಕು .
ಇ ಹೋರಾಟ ದಲ್ಲಿ ಎಲ್ಲರೂ ಭಾಗವಹಿಸಿ .
ವಂದನೆಗಳೊಂದಿಗೆ
ಕುಂದಾಪುರ ನಾಗೇಶ್ ಪೈ .