Thursday, March 24, 2011

ಅಂತರ್ಜಾಲದಲ್ಲಿ kannada bhashe

ಅಂತರ್ಜಾಲದಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಿಸಿಕೊಂಡು ಕನ್ನಡಿಗರು ಕನ್ನಡಕ್ಕಾಗಿ ಶ್ರದ್ದೆ ಬೆಳೆಸಿ .
ವ್ಯಕ್ತಿ ವಿಕಾಸ ಮಾಲಿಕೆಯಲ್ಲಿ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಪ್ರಕಟಣೆ .
ವಿಶ್ವದ ಹೆಚ್ಚಿನ ಭಾಗಗಳಲ್ಲಿ ಕನ್ನಡಿಗರು ಮತ್ತು ಕನ್ನಡ ಅರಿತ ಇತರೆ ಭಾಷೆಗಳ ನ್ನು ಆಡುವ ಜನರ ಸಂಖ್ಯೆ ಬೆಳೆಯುತ್ತಿದೆ .ಇದು ಒಂದು ಸಂತೋಷ ಮತ್ತು ತ್ರಪ್ತಿ ತರುವಂತಹ ಬೆಳವಣಿಗೆಯಾಗಿದೆ .
ಜನರ ದಿನನಿತ್ಯ ಕಾರ್ಯಕ್ರಮಗಳು ಮುಂಜಾನೆಯಿಂದ ಪ್ರಾರಂಭ .
ಚಾ ಜೊತೆ ಪತ್ರಿಕೆ ಓದುವ ಹವ್ಯಾಸ ಇಟ್ಟವರು ಬಹಳ ಮಂದಿ .
ನಾವು ಯಾಕೆ ಅಂತರ್ಜಾಲದಲ್ಲಿ ನಮ್ಮ ಕರ್ನಾಟಕದ ದಿನ ಪತ್ರಿಕೆ ಗಳಾದ

೧ ) ವಿಜಯ ಕರ್ನಾಟಕ ,ಪ್ರಜಾವಾಣಿ ,ಕನ್ನಡ ಪ್ರಭ ಮತ್ತು ಕರಾವಳಿ ಪತ್ರಿಕೆ ಉದಯವಾಣಿ ಇ ಪೇಪರ್ ನ್ನು
ಓದಬಹುದಲ್ಲವೆ ? ಇದಕ್ಕೆ ನೀವು ಹೆಚ್ಚು ಖರ್ಚು ಮಾಡುವ ಅಗತ್ಯವಿಲ್ಲ ಆದರೆ ಮುಖ್ಯವಾಗಿ ದೊಡ್ಡ ಮನಸ್ಸು ಮಾಡಬೇಕು ತಾನೇ ಅಂತರ್ಜಾಲದ ಮಾಹಿತಿ ಕಂಪ್ಯೂಟರ್ ನ ಜ್ಞಾನ ಅಗತ್ಯ .
ರಾಜ್ಯ /ಕೇಂದ್ರ ಸರ್ಕಾರ ಉಚಿತ ಮಾಹಿತಿ ಕೊಟ್ಟು ಜನರನ್ನು ರೈತಾ ಪಿ .ವ್ಯಾಪಾರ,ಶಿಕ್ಷಣ ಎಲ್ಲಾ ಕ್ಷೇತ್ರದಲ್ಲಿ ಸರ್ವತೋಮುಖ ಬೆಳವಣಿಗೆ ಬಯಸುತ್ತದೆ .ತೆರಿಗೆ ಹಣ ವನ್ನು ಉಪಯೋಗಿಸಿ ಉಚಿತ ತರಬೇತಿ ಕೊಟ್ಟು ಜನರನ್ನು ಸ್ವಾವಲಂಬಿಗಳಾಗಿ ಮಾಡಲು ಪ್ರಯತ್ನ ಪಡುತ್ತದೆ .ಬ್ಯಾಂಕ್ ,ಸರಕಾರಿ ಕಚೇರಿ ,ಪೋಲಿಸ್ ಇಲಾಖೆ ,ಅರೋಗ್ಯ .ಆಸ್ಪತ್ರೆ ಎಲ್ಲಾ ಕ್ಷೇತ್ರದಲ್ಲಿ ಕಂಪ್ಯೂಟರ್ ಬಳಕೆ ,ಪತ್ರ ವ್ಯವಹಾರ ನೋಡುವಾಗ ನಾವೆಲ್ಲರೂ ಸಂತೋಷ ಪಡಬೇಕು .
ಸಂಜೆ ಕನ್ನಡ ಭಾಷೆಯಲ್ಲಿ ಸಂಜೆವಾಣಿ ಓದುವಾಗ ವಿದೇಶದಲ್ಲಿ ವಾಸಿಸುವ ನಮ್ಮಂತಹ ಎಷ್ಟು ಮಂದಿಯ ದಿನಚರಿ ನೋಡಿ ನಿಮಗೆಲ್ಲರಿಗೂ [ಪ್ರಜ್ಞಾವಂತ ಕನ್ನಡಿಗರು] ನಿಜಕ್ಕೂ ಸಂತೋಷಕ್ಕೆ ಮಿತಿ ಇರಲಾರದು .ವಿಶ್ವಕಪ್ ಕ್ರಿಕೆಟ್ ವೀಕ್ಷಕ ವಿವರಣೆ ಥಾಟ್ಸ್ ಕನ್ನಡ /ವೆಬ್ ದುನಿಯಾ ಕನ್ನಡ ಭಾಷೆಯಲ್ಲಿ ಓದಿರಬೇಕು ಕೊನೆಗೆ ಅಡುಗೆ ಮಾಹಿತಿ ,ಯೋಗಾ ಮತ್ತು ರೋಗಗಳು ,ವೈದ್ಯರ ಮಾಹಿತಿ ಜಾತಕ ಧಾರ್ಮಿಕ ಸಂಸ್ಕೃತಿ,ದೇವಸ್ಥಾನ,ಪ್ರವಾಸಕ್ಕೆ ಟಿಕೆಟ್ ಮುಂಗಡ ಇತ್ಯಾದಿ ಸೌಲಭ್ಯಗಳುಅಂತರ್ಜಾಲದಲ್ಲಿ ಲಭಿಸಿವೆ .ಗೂಗಲ್ ಸಹಾಯದಿಂದ ಕನ್ನಡ ಭಾಷೆಯಲ್ಲಿ ಬರೆಯುವುದು ಸುಲಭವಾಗಿದೆ ನೀವು ಪ್ರಯತ್ನಿಸಿ ಗೆಳೆಯರೇ
, ಆಶಾದಾಯಕ ಉತ್ತರಕ್ಕಾಗಿ ಕಾಯುತ್ತಿರುವ ,
ಕನ್ನಡ ಭಾಷಾ ಪ್ರೇಮಿ
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ .
ಕುಂದಾಪುರ ನಾಗೇಶ್ ಪೈ

Friday, March 11, 2011

ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನ

ವಸುದೈವ ಕುಟುಂಬಕಂ
ವಿಶ್ವ ಒಂದು ಕುಟುಂಬ ಆಗಿದೆ
ಇಲ್ಲಿ ಎಲ್ಲಾ ಭಾಷೆ ಮಾತಾಡುವ ಜನರು ವಾಸಿಸುತ್ತಾರೆ.
ಎಲ್ಲಾ ಜನರಿಗೆ ಇ ಜಗತ್ತಿನಲ್ಲಿ ವಾಸಿಸಲು ಸಮಾನ ಹಕ್ಕಿದೆ .ಆಸ್ತಿ ,ಹಣ ಮತ್ತು ಅಧಿಕಾರಕ್ಕಾಗಿ ಕುಟುಂಬದ ಸದಸ್ಯರುಗಳು ಜಗಳವಾಡುವುದು ನಿರಂತರವಾಗಿ ನಡೆದುಬಂದ ಹಾಗೇ ನೀರಿಗಾಗಿ ,ಇನ್ನಿತರ ಕಾರಣದಿಂದ
ರಾಜ್ಯ /ರಾಷ್ಟ್ರ ಗಳು ಯುದ್ಧ ಮಾಡ ಬಯಸುತ್ತಾರೆ .ವಿಶ್ವದಲ್ಲಿ ಮಹಾಯುದ್ಧ ನಡೆದಿರುವುದನ್ನು ಚರಿತ್ರೆಯಲ್ಲಿಓದಿರುತ್ತೀರಿ .ಮಹಾತ್ಮ ಗಾಂಧೀಜಿ ಮುಂತಾದ ಮಹಾ ಪುರುಷರು ವಿಶ್ವ ಶಾಂತಿಗಾಗಿ ಪ್ರಯತ್ನಿಸಿ ಸಫಲ ರಾಗಿರುವುದು ಇದೆ .
ಮಹಾತ್ಮ ಬುದ್ಧ ,ಜೈನ ಧರ್ಮದ ಅನುಯಾಯಿಗಳು ಶಾಂತಿಯ ಸಂದೇಶ ಪಾಲಿಸಲು ಪ್ರಯತ್ನಿಸುತ್ತಿದ್ದಾರೆ .
ಹಿಂದೂ ಧರ್ಮ ,ಇಸ್ಲಾಂ ಮತ್ತು ಮೂಲ ಕ್ರಿಸ್ಟಿಯನ್ರೂ ವಿಶ್ವ ಶಾಂತಿ ಹಂಬಲಿಸುವಾಗ ಏಕೆ ವಿರೋಧ ?
ಮಮರಾಟಿಗರು ಮತ್ತು ಕನ್ನಡಿಗರು ಬೆಳಗಾವಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಒಂದಾಗಿರುವುದು ನಮಗೆಲ್ಲರಿಗೂ ಹರ್ಷ ತಂದಿದೆ .
ಇದೆ ರೀತಿ ಭಾಂಧವ್ಯ ತಮಿಳು,ತೆಲುಗು ಇನ್ನಿತರ ಭಾಷಿಗರು ಮುಂದುವರಿಸಿದಾಗ ನದಿಗಳ ನೀರಿನ ಹಂಚಿಕೆ ಇತ್ಯಾದಿ ಸಮಸ್ಯೆಗಳು ಬಗೆಹರಿಸಲು ಸಾಧ್ಯ .
ಸರ್ವೆ ಜನ : ಸುಕಿನೋ ಭವಂತು :
ವಿಶ್ವ ಕನ್ನಡ ಸಮ್ಮೇಳನಕ್ಕೆ ಶುಭಾಶಯಗಳು
ಭವ್ಯ ಭಾರತ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ