Saturday, May 29, 2010

ಕುಟುಂಬದ ಎಲ್ಲಾ ಸದಸ್ಯರು ನೆಮ್ಮದಿ ಮತ್ತು ಸುಖದ ಜೀವನ ಸಗಿಸಲಿ

ಶ್ರೀಯುತ ವಿಶ್ವೇಶ್ವರ ಭಟ್ ರ ಇಂದಿನ ವಿಜಯ ಕರ್ನಾಟಕ ಪತ್ರಿಕೆಯನ್ನೂ ದಯವಿಟ್ಟೂ ಓದಿ .

ಕುಟುಂಬ ಸದಾ ಆನಂದಮಯ ವಾಗಿರಲು ಒಂದು ವಿಶ್ಲೇಷಣೆ .

ಇಂದಿನ ಪೀಳಿಗೆ ಇದರ ತಾತ್ಪರ್ಯ ತಿಳಿದು ಕೊಳ್ಳುವುದು ಬಹಳ ಮುಖ್ಯ .

ಇದು ವ್ಯಕ್ತಿತ್ವ ವಿಕಾಸದ ಮೊದಲನೇ ಪಾಟ.

ಮನೆಯಲ್ಲಿ ಗಂಡ ಹೆಂಡತಿಯರ ನಡುವೆ ವಿರಸ ,ಅತ್ತೆ ಸೊಸೆಯಂದಿರ ಜಗಳ ,

ಮಗಳು ಮಾವಂದಿರ ನಡುವೆ ವೈಮನಸ್ಸು ದೂರ ಮಾಡುವ ದಿವ್ಯೌಷಧ.

ಜಗಳಗಳೂ ಕೋರ್ಟ್ ಮೆಟ್ಟಿಲು ಹತ್ತಿಸುವುದನ್ನು ತಪ್ಪಿಸುವ ಸುಲಭ ಮಾರ್ಗ ವಾಗಿದೆ .

ತಣಿದ ನೀರನ್ನು ಇನ್ನೂ ತಣಿಸಿ ಕುಡಿಯಿರಿ ಎಂದು ಮನೆಯಲ್ಲಿ ಗುರು ಹಿರಿಯರು ಹೇಳಿದ್ದನ್ನು ಕೇಳಿರ ಬಹುದು .

ಸಿಟ್ಟು ಬಂದಾಗ ಒಂದರಿಂದ ನೂರರ ತನಕ ಎಣಿಸು ಎನ್ನುತ್ತಾರೆ .

ಇದು ಗಣಿತದ ಪಾಟ ವಾಗದೆ ಜೀವನ ನಡೆಸುವ ಹಿತೋಕ್ತಿ ಯಾಗಿದೆ .

ವಿವಾಹ ಗಳೂ ಮುರಿದು ಬೀಳುವ ಸಂಧರ್ಭ ಗಳೇ ಹೆಚ್ಚುತ್ತಿರುವ ಇ ಕಾಲದಲ್ಲಿ ಶ್ರೀಯುತ ಭಟ್ಟರ ಮಾತು ಉಪಯೋಗಿಸಿ

ಕುಟುಂಬಗಳು ಧನ್ಯರಾಗುತ್ತಾರೆ.

ಕುಟುಂಬ ನೆಮ್ಮದಿಯ ಮತ್ತು ಶಾಂತಿಯ ಬಾಳನ್ನು ಬಯ ಸುವವರು


ಒಮ್ಮೆ ಹೊಂದಾಣಿಕೆಯ ಜೀವನ ಪ್ರಯೋಗ ಪ್ರಯತ್ನಿಸಿರಿ .

ವಿವಾಹ ವಿಚ್ಹೆಧನ ಗಳ ಸಂಖ್ಯೆ ಕಡಿಮೆಯಾಗುವುದು ನಿಜ .

ಆಸ್ತಿ ,ಪಾಸ್ತಿಗಳ ಜಗಳ ಮನೆಯಲ್ಲಿ ಮಕ್ಕಳ ಅಂತರ್ ಕಲಹ ಪುನಃ ಕೋರ್ಟ್ ಕಚೇರಿ ವ್ಯಾಜ್ಯಗಳು ವರ್ಷಗಟ್ಟಲೆ ಕೊಳೆತುಹೋಗುವ

ನ್ಯಾಯಾಲಯದ ಖರ್ಚು ಕಡಿಮೆ ಮಾಡಲು ಹೊಂದಾಣಿಕೆಯ ಮಾರ್ಗ ಹಿಡಿಯಿರಿ ಕುಟುಂಬ ಸದಸ್ಯರು ಸಂತೋಷವಾಗಿರಿ .


ಇನ್ನೂ ಹೆಚ್ಚಿನ ಸನ್ನಿವೇಶಗಳ ಬಗ್ಗೆ ವಿವರಿಸುವ ಅಗತ್ಯ ನನಗೆ ಕಂಡು ಬಂದಿಲ್ಲ.

ವಾಚಕರು ಅನುಭವಿಗಳು .

ಇದರ ತಾತ್ಪರ್ಯ ಯುವಜನಾಂಗಕ್ಕೆ ಮಾರ್ಗದರ್ಶಿಯಾಗಲಿ ಎನ್ನುವುದು ನನ್ನ ಸವಿನಯ ಪ್ರಾರ್ಥನೆ ಆಗಿದೆ .

ಭವ್ಯ ಭಾರತದ ನವ ನಿರ್ಮಾಣ ವೇದಿಕೆ .

ಕುಂದಾಪುರ ನಾಗೇಶ್ ಪೈ .

Wednesday, May 26, 2010

ಹಳೆ ಮರಗಳು ಮತ್ತು ಕಟ್ಟಡಗಳ ಮರಣಹೋಮ

ವ್ಯಕ್ತಿತ್ವ ವಿಕಾಸ ಮಾಲಿಕೆ ಮುಂದುವರಿಯುವುದು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಆಧುನಿಕತೆಗೆ ಮರಗಳು ಮತ್ತು ಚಾರಿತ್ರಿಕ ಕಟ್ಟಡಗಳು ನಾಶವಾಗುವುದನ್ನು ನೀವು ಬೆಂಬಲಿಸುವಿರಾ?
ಇದು ನಮ್ಮ ಬೆಳೆಯುತ್ತಿರುವ ಸಮಾಜದ ಮುಂದೆ ಬ್ರಹದಾಕಾ ರವಾಗಿ ನಿಂತಿರುವ ಪ್ರಶ್ನೆ.
ಇಲ್ಲಿ ದ್ವಂದ್ವ ಅಭಿಪ್ರಾಯಗಳನ್ನೂ ವಿಜಯ ಕರ್ನಾಟಕ ಪತ್ರಿಕೆ ಕರ್ನಾಟಕ ರಾಜ್ಯದ ಮೂಲೆ ಮೂಲೆಗಳನ್ನು ತಲುಪಲು ಪ್ರಯತ್ನಿಸಿ.ಇನ್ನೂ ಚರ್ಚೆ ನಡೆಯುತ್ತಿದೆ .
೧ ಬುದ್ಧಿಜೀವಿಗಳು ಇವುಗಳ ರಕ್ಷಣೆಗಾಗಿ
೨ ಇಂದಿನ ಯುವ ಸಮುದಾಯ ವ್ಯಾಪಾರೀ ಲಾಭ ಕ್ಕಾಗಿ ಸಮರ್ಥಿಸುತ್ತಾರೆ .
ಸುರಕ್ಷತೆಯನ್ನು ಗಮನಿಸುವುದು ಹಳೆಯ ಕಟ್ಟಡ ಮತ್ತು ಮರಗಳಿಂದಾದ ಪ್ರಾಣ ಹಾನಿ ನೋಡಿದರೆ ಇವುಗಳ ನಾಶ ಸರಿ ಎನಿಸುತ್ತದೆ .
ಆದರೆ ಕೆಲವರು ಹಣದಿಂದ ಏನೂ ಕೊಂಡುಕೊಳ್ಳಲು ಸಾಧ್ಯವಿದೆ .
ಮೈಸೂರು ನಗರ ರಸ್ತೆ ಅಗಲೀಕರಣ .ಉದ್ಯಾನವನಗಳಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ ವಿಷಯಗಳು ಬಿಡಿಸಲಾರದ ಕಗ್ಗಂಟಾಗಿ ಉಳಿದಿದೆ .
ಇದಕ್ಕೆ ಎಲ್ಲರೂ ಮುಖ್ಯವಾಗಿ ನಾಗರೀಕರು,ಸರ್ಕಾರ ಒಗ್ಗಟ್ಟಿನಿಂದ ಸ್ಪಂದಿಸಿದರೆ ಮಾರ್ಗ ಹುಡುಕಿ
ಜನ ಕಲ್ಯಾಣ ವ್ಯಕ್ತಿತ್ವ ವಿಕಾಸ ಮತ್ತು ಅಭಿವ್ರದ್ಧಿ ಗೋಚರಿಸುವ ಹಸಿರು ನಿಶಾನೆ ಇದೆ .
ಉದ್ಯಾನವನಗಳಲ್ಲಿ ವಾಯುವಿಹಾರ ಯೋಗಭ್ಯಾಸ ಮತ್ತು ಸಮ ತೂಕದ ಆಹಾರ , ಉತ್ತಮ ಆರೋಗ್ಯದಿಂದ ,

ರಾಜ್ಯ /ದೇಶದ ಜನತೆ ನೆಮ್ಮದಿ /ಸುಖದ ಜೀವನ ಸಾಗಿಸ ಬಹುದು .
ನಮ್ಮ ಸುಂದರ ,ನಿರ್ಮಲ ಮತ್ತು ಹಸಿರುಮಯ ಮೈಸೂರು .
ಸಿರಿ ಕನ್ನಡಂ ಗೆಲ್ಗೆ /ಬಾಳ್ಗೆ .
ಕುಂದಾಪುರ ನಾಗೇಶ್ ಪೈ .

Tuesday, May 18, 2010

ಜೀವನ ಒಂದು ಪಯಣ ನಾವೆಲ್ಲರೂ ಪಯಣಿಗರು .ಅವನೇ ಸೂತ್ರಧಾರ

ನಮ್ಮ ಜೀವನ ಒಂದು ಪಯಣ .ಇಲ್ಲಿ ನಾವೆಲ್ಲರೂ [ಮನುಷ್ಯ ಜಾತಿ ,ಪ್ರಾಣಿಗಳು,ಪಕ್ಷಿಗಳು,ಮೀನುಗಳು ಮತ್ತು ನೀರಿನಲ್ಲಿ ವಾಸಿಸುವ ಇತರೆಲ್ಲಾ] ಜೀವಿಗಳು ಪಯಣಿಗರು .
ರಾಜಕೀಯ ವ್ಯವಹಾರಕ್ಕಾಗಿ ರಾಜ್ಯದ /ಕೇಂದ್ರದ ಮಂತ್ರಿ /ಮುಖ್ಯ ಮಂತ್ರಿ /ಪ್ರಧಾನ ಮಂತ್ರಿ ಹಾಗೂ ರಾಷ್ಟ್ರಪತಿಗಳು ದೇಶ /ವಿದೇಶ ಗಳಲ್ಲಿ ಸಂಚರಿಸಿ ಸರ್ವತೋಮುಖ ಅಭಿವ್ರದ್ಧಿ ಯನ್ನೂ ಪ್ರವಾಸ ಮತ್ತು ಸಂಬಂಧ ಬೆಳಸುತ್ತಾರೆ .
ಸ್ವಾಮೀಜಿಯವರು ಪಾದ್ರಿಗಳು ದೇಶಾದ್ಯಂತ/ವಿದೇಶಗಳಲ್ಲಿ ಪ್ರವಾಸ ಮಾಡಿ ಧರ್ಮ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗುವರು .
ಒಂದು ಹೆಣ್ಣು ಮದುವೆಯಾಗಿ ಹುಟ್ಟಿದ ಊರನ್ನು ತೊರೆದು ತನ್ನ ಗಂಡನ ಮನೆಯಲ್ಲಿ ಜೀವನ ಪೂರ್ತಿ ನೆಲಸುವಳು .
ಗಂಡು /ಹೆಣ್ಣು ವಿದ್ಯಾರ್ಜನೆಗಾಗಿ ಮತ್ತು ಉದ್ಯೋಗದಲ್ಲಿ ಪ್ರವಾಸ ಮಾಡುತ್ತಾರೆ.
ಪಕ್ಷಿಗಳು [ರಂಗನತಿಟ್ಟು /ಕೊಕ್ಕರೆ ಬೆಳ್ಳೂರು ಇತ್ಯಾದಿ ಪಕ್ಷಿಧಾಮದಲ್ಲಿ ಸಾವಿರಾರು ಮೈಲು ಸಂಚರಿಸಿ ಪಕ್ಷಿಗಳು ತಮ್ಮ ಸಂತಾನ ಹೆಚ್ಚಿಸುತ್ತವೆ
ಜಗತ್ತಿನ ಪ್ರಸಿದ್ದ ಮೈಸೂರು ದಸರಾನಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಂದು ದಸರಾ ಮುಗಿದ ಮೇಲೆ ಕಾಡಿಗೆ ಮರಳುತ್ತವೆ .
ಹೀಗೆ ನೀರಿನಲ್ಲಿ ಮೀನುಗಳು ಯಾವುದೊ ದೇಶದಿಂದ ಯಾವುದೋ ದೇಶಕ್ಕೆ ಹೋಗಿ ಸಂತಾನ ಅಭಿವ್ರದ್ಧಿ ಮಾಡುತ್ತವೆ .ಬೆಕ್ಕು ಹುಟ್ಟಿದ ಮರಿಗಳನ್ನು ೭ ಮನೆಗಳಲ್ಲಿ ಕೊಂಡು ಹೋಗಿ ಪರಿಚಯ ಮಾಡಿಸುತ್ತದೆ .
ಹಾವೂ ತನ್ನ ಆಹಾರಕ್ಕಾಗಿ ಮನೆಯೊಳಕ್ಕೆ ಬಂದು ಜನರಿಗೆ ಗಾಬರಿ ಪಡಿಸುವ ಘಟನೆಗಳು ಇವೆ .
ಸಂಗೀತ /ಕಲಾ/ಚಲನ ಚಿತ್ರ ತಾರೆಯರು ಪ್ರವಾಸ ಮಾಡಿ ತಮ್ಮ ಅಭಿಮಾನಿಗಳಿಗೆ ಸಂತೋಷ ಪಡಿಸುತ್ತಾರೆ .
ಒಲಿಂಪಿಕ್ಸ್ ಕ್ರಿಡೆಗಳಲ್ಲಿ ಕ್ರಿಕೆಟ್ ,ಹಾಕಿ ಇತ್ಯಾದಿಗಳಲ್ಲಿ ಭಾಗವಹಿಸಲು ದೇಶ ವಿದೇಶಗಳಲ್ಲೂ ಪ್ರವಾಸ ಮಾಡಬೇಕು.
ಹೀಗೆ ಸಾಮಾನ್ಯವಾಗಿ ಇಂದಿನ ಪೀಳಿಗೆ ವಿದ್ಯಾಮತ್ತು ಉದ್ಯೋಗದಲ್ಲಿ ದೇಶ /ವಿದೇಶ ಸಂಚಾರ ಮಾಡುವುದರಿಂದ ಹೆತ್ತವರೂ ಮಕ್ಕಳ ಜೊತೆಯಲ್ಲಿ ತಾವೂ ದೇಶ /ವಿದೇಶ ಪ್ರವಾಸ ಮಾಡುವ ಸಂದರ್ಭ ವಾಡಿಕೆಯಲ್ಲಿ ಇರುವುದು .
ನಾನು ಇದಕ್ಕೆ ಹೊರತಾಗಿಲ್ಲ.
ನನ್ನ ಉದ್ಯೋಗದಲ್ಲಿ ದೇಶ ಸಂಚಾರ ಮಾಡಿ ನಮ್ಮ ಮಕ್ಕಳಿಗಾಗಿ ಈಗ ವಿದೇಶ ಪ್ರವಾಸ ಮಾಡುತ್ತಿದ್ದೇನೆ .
ನಮ್ಮ ಜೀವನ ಒಂದು ಪಯಣ .ನಾವೆಲ್ಲರೂ ಪಯಣಿಗರು .
ಇಲ್ಲಿ ಬಹು ಮುಖ್ಯ ವಿಷಯ ವೇನೆಂದರೆ ಒಂದು ರಹಸ್ಯ
ಯಾರಿಗೂ ತಿಳಿಯಲಾಗದು ಜೀವನದ ಕೊನೆಯ ಪಯಣದ ಸಮಯ ಮತ್ತು ದಿನಾಂಕ.
ಆದರೆ ಸುಖಾಂತ್ಯ ಬಯಸುವ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ .

Thursday, May 13, 2010

ನಮ್ಮ ರಾಜ್ಯದ/ರಾಷ್ಟ್ರದ ಕಲೆ ಮತ್ತು ಸಂಸ್ಕ್ರತಿಗೆ ಇಂದಿನ ಪೀಳಿಗೆಯ ಪ್ರೋತ್ಸಾಹದ ಅವಶ್ಯಕತೆ ಇದೆ .

ವ್ಯಕ್ತಿತ್ವ ವಿಕಾಸ ಮಾಲಿಕೆ ಮುಂದುವರಿಯುತ್ತದೆ
ನಮ್ಮ ಕರ್ನಾಟಕದ/ಭವ್ಯ ಭಾರತದ ಪ್ರಾಚೀನ ಕಲೆ ಮತ್ತು ಸಂಸ್ಕ್ರತಿ ಮೇಣದ ಬತ್ತಿ ಉರಿಯುವಾಗ ಕರಗುವ ರೀತಿಯಲ್ಲಿ ಕಣ್ಮರೆಯಾಗುತ್ತಿದೆ.ಇದನ್ನು ಕೆಲವು ಹಳೆಯ ಪೀಳಿಗೆಯವರು ಗಮನಿಸಿ ಪುನರ್ನಿರ್ಮಾಣಕ್ಕೆ ತಕ್ಕ ಮಾರ್ಗೋಪಾಯಗಳ ಬಗ್ಗೆ ಚಿಂತಿಸಿ ಇಂದಿನ ಯುವಜನತೆಗೆ ಮಾರ್ಗದರ್ಶನ ನೀಡಲು ಪ್ರಯತ್ನಿಸುತ್ತಿದ್ದಾರೆ.
ಇಲ್ಲಿ ವಿಶೇಷವೇನೆಂದರೆ ನಮ್ಮ ಕಲೆ ,ಯೋಗ ಮತ್ತು ಸಂಸ್ಕ್ರತಿಯ ಮಹತ್ವ ಅರಿತುಕೊಂಡ ವಿದೇಶಿಯರಿಗೆ
ನಮ್ಮ ಭಾರತದಲ್ಲಿ ನೆಲಸಿ ಸಮರಾಭ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ತಾಯ್ನಾಡಿಗೆ ವಾಪಾಸಾಗಿ ಅಲ್ಲಿ ಅಭ್ಯಾಸಕ್ಕೆ ಪ್ರಾರಂಬಿ ಸುವರು .
ಆದರೆ ನಮ್ಮವರ ಕಥೆ ಬೇರೆಯಾಗಿದೆ .
ನಮ್ಮ ಶ್ರೀಮಂತ ಕಲೆ ಗಳನ್ನೂ ಬಿಟ್ಟು ಪಾಶ್ಚಾತ್ಯ ಜನರನ್ನು ಹಿಂಬಾಲಿಸುತ್ತಾ ಹೋಗುತ್ತೇವೆ .
ಇಂದಿನ ಅಂತರ್ಜಾಲ ಯುಗದಲ್ಲಿ ಸಮಯದ ಅಭಾವ ,ಉನ್ನತ ವಿಧ್ಯಾಭ್ಯಾಸ ,ಉಧ್ಯೋಗ ಮತ್ತು ಕುಟುಂಬ ನಿರ್ವಹಣೆ ಕೊನೆಯಾದಾಗಿ ವಿಲಾಸಿ ಜೀವನಕ್ಕೆ ಜೋತುಬಿದ್ದು ನಮ್ಮ ಇ ಪೀಳಿಗೆಗೆ ಕಲೆ,ಸಂಸ್ಕ್ರತಿ ಯ ಅಭಿವೃಧ್ಧಿಯ ಕನಸು ಸಾಕಾರ ವಾಗಲು ಸಾಧ್ಯವಿಲ್ಲ.

೧ ಜನಪದ
೨ ನ್ರತ್ಯ
೩ ನಾಟಕ
೪ ಯಕ್ಷಗಾನ
ಉಪ್ಪಿನ ಕುದ್ರು ಕಾಮತರ ಯಕ್ಷಗಾನ ಗೊಮ್ಬೇಯಾಟ ,ಹೂ ಕೋಲು ,ತಾಳ ಮದ್ದಳೆ
೫ ಭಜನೆ ಮತ್ತು ದಾಸರ ಕೀರ್ತನೆಗಳು
೬ ಡಾ ಶಿವರಾಂ ಕಾರಂತರ ಯಕ್ಷಗಾನ
ಕಬಡ್ಡಿ ಇತ್ಯಾದಿ ಪಂದ್ಯಗಳು
೭ ರೈತರು ಕೆಸರು ಗದ್ದೆಯಲ್ಲಿ ಆಡುವ ಪಂದ್ಯ ಕಂಬಳ ಇತ್ಯಾದಿ
ಗ್ರಾಮೀಣರು ನಡೆದ ಬಂದ ಕಲೆ ,ಸಂಸ್ಕ್ರತಿಗೆ ಪ್ರೋತ್ಸಾಹ ಉತ್ಸಾಹಿ ತರುಣರಿಂದ ಹಾಗೂ ಆಡಳಿತ ಸರಕಾರದಿಂದ ಬೇಕಾಗಿದೆ
ಆದರೆ ಹಗರಣಗಳು ,ಮೋಸ ವಂಚನೆ ರಸ್ತೆಯ ಅಪಘಾತ ದಿನೇ ದಿನೇ ಏರುತ್ತಿವೆ .
ರಾಜಕೀಯ ಜಗಳ ವನ್ನು ಬಿಟ್ಟು ಪಕ್ಷಾತೀತವಾಗಿ ಕಲೆ ಮತ್ತು ಸಂಸ್ಕ್ರತಿ ಯನ್ನೂ ಬೆಳೆಸುವುದೇ ನಮ್ಮ ಆದ್ಯ ಕರ್ತವ್ಯಗಳು ಎಂದು ತಿಳಿದು ಮನಸಾರೆ ಶ್ರಮಿಸಿದಾಗ ನಮ್ಮ ನಿರ್ಮಾಣ ಕಾರ್ಯ ಸಫಲತೆ ಕಾಣುವುದು ನಿಜ
ಭವ್ಯ ಭಾರತದ ನವ ನಿರ್ಮಾಣ ವೇದಿಕೆ .
ಕುಂದಾಪುರ ನಾಗೇಶ್ ಪೈ

Saturday, May 8, 2010

ಇಂದು ಅಮ್ಮಂದಿರ ದಿನಾಚರಣೆ

ಇಂದು ಅಮ್ಮಂದಿರ ದಿನಾಚರಣೆ .
ಇದು ಕೇವಲ ಗ್ರೀಟಿಂಗ್ಸ್ ಗೆಲ್ಲರಿ ಯ ಶುಭಾಶಯ ಹಂಚುವ ವಿಷಯ ವಾಗದೆ ತಾಯಂದಿರ ನೋವನ್ನು ಅರ್ಥ ಮಾಡಿಕೊಂಡು ಸಾಂತ್ವನ ಕೊಡುವುದು ,ಅರೋಗ್ಯ ನೋಡಿಕೊಳ್ಳುವುದು /ಎಲ್ಲಾ ರೀತಿಯ ಅನುಕೂಲತೆ ಕೊಟ್ಟು ಅಮ್ಮನನ್ನು ಸದಾ ಹರ್ಷ ಭರಿತಳಾಗಿ ಇಟ್ಟು ಅವಳ ಸೇವೆ ಮಾಡಬೇಕು .
ಮನಸ್ಸು ನೋಯಿಸದೆ ಅವಳ ಋಣ ತೀರಿಸಲು ಪ್ರಯತ್ನಿಸಬೇಕು .
ಭವ್ಯ ಭಾರತದ ನವ ನಿರ್ಮಾಣ ವೇದಿಕೆ ವಿಶ್ವದ ಎಲ್ಲಾ ಅಮ್ಮಂದಿರಿಗೆ ಸಾಷ್ಟಾಂಗ ವಂದಿಸಿ ಅಶಿರ್ವಚನ ಕ್ಕಾಗಿ
ಕಾಯುತ್ತಿದೆ .
ಕುಂದಾಪುರ ನಾಗೇಶ್ ಪೈ .
ಹುಟ್ಟಿದ ತಕ್ಷಣ ನೋಡುವ ಮುಖ ಅಮ್ಮನದು ಆಡುವ ಮೊದಲ ಶಬ್ದ ಅಮ್ಮ .
ಜೈ ಕರ್ನಾಟಕ ಮಾತೆ .
ಭಾರತ್ ಮಾತಾ ಕೀ ಜೈ